ಪರಪ್ಪನ ಅಗ್ರಹಾರಕ್ಕೆ ಕೊರೊನಾ ಕಂಟಕ: ಮತ್ತೆ 30 ಕೈದಿಗಳಿಗೆ ಸೋಂಕು ದೃಢ

ಬೆಂಗಳೂರು: ರಕ್ಕಸ ಕೊರೊನಾದ ಕರಾಳತೆ ಮಿತಿ ಮೀರುತ್ತಿದೆ. ಇದೀಗ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಿಟ್ಟು ಬಿಡದೆ ಕಾಡ್ತಾಯಿದೆ. ಕಳೆದ ಒಂದು ವಾರದ‌ ಹಿಂದೆ ಜೈಲಿನ ಸಿಬ್ಬಂದಿ ಸೇರಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಮತ್ತೆ ಜೈಲಿನ 30 ಕೈದಿಗಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ಇತ್ತೀಚೆಗೆ ಜೈಲಿಗೆ ಬಂದಿದ್ದ 80 ಕೈದಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ಪೈಕಿ 30 ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ 30 ಕೈದಿಗಳನ್ನು ಹಜ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜೊತೆಗೆ, ಪರಪ್ಪನ ಅಗ್ರಹಾರ ಜೈಲಿಗೆ ಹೊಸ ಕೈದಿಗಳಿಗೆ ಎಂಟ್ರಿ ನಿಷೇಧಿಸಲಾಗಿದ್ದು ಜೈಲಿನ ಪಕ್ಕದಲ್ಲಿರುವ ಮತ್ತೊಂದು ಹೊಸ ಕಟ್ಟಡದಲ್ಲಿ ಕೈದಿಗಳಿಗೆ ಇರಲು ಅವಕಾಶ ಕಲ್ಪಿಸಲಾಗಿದೆ.

Related Tags:

Related Posts :

Category:

error: Content is protected !!