ಡಿಕೆಶಿ ಪ್ರಕರಣದಲ್ಲಿ ಹೈಕಮಾಂಡ್​​​ಗೂ ಕಾದಿದೆಯಾ ಬಿಸಿ?

ಕಾಂಗ್ರೆಸ್​ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ಪ್ರಕರಣದಲ್ಲಿ ಹೈಕಮಾಂಡ್​ಗೂ ನಂಟು ಇದೆಯಾ? ಈ ಸಂಬಂಧ ಎಐಸಿಸಿಗೂ ಇಡಿ ನೋಟಿಸ್ ನೀಡುತ್ತಾ ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ.

 ಸದ್ಯ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್​ ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ. ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದಾಗ ದಾಖಲೆಯಿಲ್ಲದ ಹಣ ಮತ್ತು ಕೆಲವು ದಾಖಲೆಗಳು ಸಿಕ್ಕಿದ್ದವು. ಈ ಸಂಬಂಧ ನಿರಂತರವಾಗಿ ಇಡಿ ಅಧಿಕಾರಿಗಳು ಡಿಕೆಶಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿಯ ಸಪ್ದರ್​ಜಂಗ್​ ಪ್ಲ್ಯಾಟ್​ನಲ್ಲಿ ಸಿಕ್ಕ ಹಣವನ್ನು ಹೈಕಮಾಂಡ್​ಗೆ ನೀಡುವ ಉದ್ದೇಶವಿತ್ತಾ? ಅಥವಾ 2017ಕ್ಕೂ ಮುಂಚೆಯೇ ಎಐಸಿಸಿಗೆ ಹಣ ತಲುಪಿಸಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಡಿಕೆಶಿಗೆ ಇಡಿ ಅಧಿಕಾರಿಗಳು ಕೇಳುತ್ತಿದ್ದಾರೆ.

ಹಣವನ್ನು ಎಐಸಿಸಿಗೆ ನೀಡಲು ಸಫ್ದರ್​ಜಂಗ್​ ಪ್ಲ್ಯಾಟ್​ನಲ್ಲಿಡಲಾಗಿತ್ತು ಎಂದು ಮತ್ತೊಬ್ಬ ಆರೋಪಿ ಆಂಜನೇಯ ಹೇಳಿಕೆ ಕೊಟ್ಟಿದ್ದರು. ಡಿಕೆಶಿ ಆಪ್ತ ಹಾಗೂ ಕಾರು ಚಾಲಕ ರಾಜೇಂದ್ರ ವರ್ಮಾ ಸಹ ಇದೇ ರೀತಿ ಹೇಳಿಕೆ ನೀಡಿದ್ದರು. ಹೀಗಾಗಿ ಎಐಸಿಸಿ ಹಣಕಾಸು ವಿಭಾಗದ ಪದಾಧಿಕಾರಿಗಳಿಗೆ ಇಡಿ ಅಧಿಕಾರಿಗಳು ಸಮನ್ಸ್​ ನೀಡುವ ಸಾಧ್ಯತೆ ಇದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!