ಮದೀನಾ ಸರ್ಕಲ್‌ನಲ್ಲಿ ಧ್ವಜಾರೋಹಣ ಮಾಡಿದ ಅಸಾದುದ್ದಿನ್‌ ಓವೈಸಿ

ಹೈದರಾಬಾದ್‌: ಭಾರತದ 74ನೇ ಸ್ವಾತಂತ್ರ್ಯ ದಿನೋತ್ಸೋವವನ್ನು ಎಐಎಂಐಎಂ ನಾಯಕ ಅಸಾದುದ್ದಿನ್‌ ಓವೈಸಿ ತೆಲಂಗಾಣದ ಹೈದರಾಬಾದ್‌ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದ್ದಾರೆ.

ಇಂದು ಬೆಳಗ್ಗೆ ಹೈದರಾಬಾದ್‌ನ ಮದೀನಾ ಸರ್ಕಲ್‌ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸೇರಿದ್ದ ಓವೈಸಿ, ರಾಷ್ಟ್ರೀಯ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಿದರು.

ಸೇರಿದ್ದ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಓವೈಸಿ ಹಸಿರು, ಬಿಳಿ ಹಾಗೂ ಕೇಸರಿ ಬಣ್ಣದ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಸ್ವಾತಂತ್ರ್ಯ ಸಂಭ್ರಮಿಸಿದರು.

Related Tags:

Related Posts :

Category: