‘ಐಂದ್ರಿತಾ ದಂಪತಿ ನೆರೆ‘ಹೊರೆ’ಯವರೇ! ಜೋರು ಧ್ವನಿಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು’

ಬೆಂಗಳೂರು: ಸ್ಯಾಂಡಲ್​ವುಡ್ ನಟ-ನಟಿಯರಿಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್ ಐಂದ್ರತಾ ಹಾಗೂ ದಿಗಂತ್​ಗೆ ಸಿಸಿಬಿ ನೋಟಿಸ್ ನೀಡಿದೆ. ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಪರ ವಿರೋಧ ಹೇಳಿಕೆಗಳು ಹೊರ ಬರುತ್ತಿವೆ. ಈ ಬಗ್ಗೆ ನಟ ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ.

ಡ್ರಗ್ ಮಾಫಿಯಾ ಏಕಾಏಕಿ ಹುಟ್ಟಿದಲ್ಲ. ಐಷಾರಾಮಿ ಬದುಕು ಈ ರೀತಿ ಮಾಡಿಸುತ್ತಿದೆ. ಡ್ರಗ್ಸ್ ಜಾಲದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನನಗಿದು ಗೊತ್ತಿಲ್ಲದ ಸಂಗತಿ. ಸಾಮಾಜಿಕ ಸ್ವಾಸ್ಥ್ಯವನ್ನು ಇವೆಲ್ಲ ಹಾಳು ಮಾಡುತ್ತಿದೆ.

ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ನನ್ನ ಮನೆ ಪಕ್ಕಾನೇ ಇಬ್ಬರು ಇದ್ದಾರೆ. ಸಂಭ್ರಮದ ಸದ್ದು ಈ ಹಿಂದೆಯೂ ಕೇಳಿಸಿತ್ತು. ಜೋರು ಧ್ವನಿಗೆ ಮಧ್ಯರಾತ್ರಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ರು ಎಂದು ದಿಗಂತ್ ಮನೆ ರಸ್ತೆಯ ಎದುರಿನ ರಸ್ತೆಯಲ್ಲಿರೋ ನಟ ಸುಚೇಂದ್ರ ಪ್ರಸಾದ್ ಹೇಳಿದ್ರು.

Related Tags:

Related Posts :

Category: