‘ಬ್ರಹ್ಮಾಸ್ತ್ರ’ ಮೂಲಕ ಚಂದನವನಕ್ಕೆ ಬರ್ತಿದ್ದಾರೆ ಬಿಟೌನ್ ಬ್ಯೂಟಿ ಆಲಿಯಾ ಭಟ್

ಬಾಲಿವುಡ್​ನ ಸ್ಟಾರ್ ನಟಿ ಆಲಿಯಾ ಭಟ್ ಬಗ್ಗೆ ಹೊಸದೊಂದು ಸುದ್ದಿ ಹರಿದಾಡ್ತಾ ಇದೆ. ಆಲಿಯಾ ಭಟ್ ಸದ್ಯ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಅಚ್ಚರಿ ಆದ್ರೂ ಇದು ನಿಜ. ಹಾಗಿದ್ರೆ ಆಲಿಯಾ ಕನ್ನಡಕ್ಕೆ ಬರೋದ್ರ ಹಿಂದಿನ ಗುಟ್ಟೇನೂ ಅನ್ನೋದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ಓದಿ.

ಆಲಿಯಾ ಭಟ್. ಬಿಟೌನ್ ಬ್ಯೂಟಿ. ಬಾಲಿವುಡ್​ನಲ್ಲಿ ಮಿಂಚು ಹರಿಸಿ ಅಭಿಮಾನಿಗಳ ಹೃದಯ ಗೆದ್ದ ಚೆಲುವೆ. ಹೀಗೆ ನಂಬರ್ ಒನ್ ಸ್ಥಾನದಲ್ಲಿ ಮಿಂಚುತ್ತಿರೋ ಕ್ಯೂಟಿ ಆಲಿಯಾ ಭಟ್ ಸುತ್ತಾ ಹೊಸದೊಂದು ಸುದ್ದಿ ಹರಿದಾಡ್ತಾ ಇದೆ. ಆಲಿಯಾ ಕನ್ನಡಕ್ಕೆ ಬರ್ತಿದ್ದಾರೆ. ಆಲಿಯಾ ಅಭಿನಯದ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ರಿಲೀಸ್ ಆಗಲಿದೆ ಅನ್ನೋದು ಕನ್ಫರ್ಮ್ ಆಗಿದೆ. ಚಿತ್ರದ ನಿರ್ಮಾಪಕ ಕರಣ್​ ಜೋಹರ್ ಈ ವಿಚಾರವನ್ನ ಖಚಿತ ಪಡಿಸಿದ್ದಾರೆ.

ಹೌದು.. ಆಲಿಯಾ ಭಟ್ ಕನ್ನಡಕ್ಕೆ ಬರ್ತಿರೋದು ಬಾಲಿವುಡ್ ಸಿನಿಮಾದ ಮೂಲಕವೇ. ಆಲಿಯಾ ಜೊತೆಗೆ ನಟ ರಣ್ಬೀರ್ ಕಪೂರ್ ಕೂಡ ಕನ್ನಡಲ್ಲಿ ಕಮಾಲ್ ಮಾಡೋಕೆ ಸಿದ್ಧವಾಗಿದ್ದಾರೆ. ಅಂದ್ರೆ ಆಲಿಯಾ ಜೊತೆಗೆ ಅಮಿತಾಬ್ ಬಚ್ಚನ್ ಮತ್ತು ರಣ್ಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್​ಗೆ ರೆಡಿಯಾಗ್ತಿದೆ. ಇದೇ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ.

ಭಾರತೀಯ ಸಿನಿರಂಗದಲ್ಲಿ ಬಾಲಿವುಡ್ ಚಿತ್ರರಂಗದ್ದೇ ಮೇಲುಗೈ. ಈಗ ಇದೇ ಬಾಲಿವುಡ್ ಸಿನಿಮಾಗಳು ಕನ್ನಡಿಗರನ್ನ ಅರಸಿಕೊಂಡು ಬರ್ತಿವೆ. ಅದ್ರಲ್ಲೂ ಬ್ರಹ್ಮಾಸ್ತ್ರ ಅನ್ನೋ ಬಿಗ್ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತೆ ಅಂದ್ರೆ ಅಚ್ಚರಿ ಆಗದೇ ಇರದು. ಈಗ ಕನ್ನಡದ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಕಂಡಿತ್ತು.

ಈಗ ಸಾಲು ಸಾಲಾಗಿ ಬಾಲಿವುಡ್ ಸಿನಿಮಾಗಳು ಕನ್ನಡ ಭಾಷೆಯಲ್ಲಿ ರಿಲೀಸ್ ಆಗ್ತಿರೋದು ಒಳ್ಳೆ ಬೆಳವಣಿಗೆ ಸರಿ. ಇದ್ರೊಂದಿಗೆ ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಲು ಸಜ್ಜಾಗಿದೆ. ಈ ಮೂಲಕ ಇಳಯ ದಳಪತಿ ವಿಜಯ್ ಕೂಡ ಡಬ್ಬಿಂಗ್ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ.

ಸದ್ಯ ಕನ್ನಡದಲ್ಲಿ ರಿಲೀಸ್​ ಆಗ್ತಿರೋ ಪರಭಾಷಾ ಸಿನಿಮಾಗಳ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಇದು ಕನ್ನಡ ಸಿನಿಮಾಗಳಿಗೆ ವರದಾನ ಆಗುತ್ತಾ? ಅಥವಾ ಶಾಪವಾಗುತ್ತಾ ನೋಡ್ಬೇಕು.

Related Tags:

Related Posts :

Category:

error: Content is protected !!