1,288 ಕೋಟಿಯಷ್ಟು ವ್ಯಾಪಾರವಾದ್ರೂ ಬರಿ 58 ಕೋಟಿ ರೂ. Tax ಕಟ್ಟಿದ ಅಮೆಜಾನ್, ಯಾಕೆ?

2019ರಲ್ಲಿ ಬರೋಬ್ಬರಿ 17.5 ಬಿಲಿಯನ್​ ಡಾಲರ್​ನಷ್ಟು​ (1,288 ಕೋಟಿ ರೂ.) ವ್ಯಾಪಾರ ವಹಿವಾಟು ನಡೆಸಿದ ಅಮೆಜಾನ್​ ಕಂಪನಿಯು ಕೇವಲ 8 ಮಿಲಿಯನ್​ ಡಾಲರ್ (58 ಕೋಟಿ ರೂ.) ಕಾರ್ಪೊರೇಷನ್​ ತೆರಿಗೆ ಜಮಾಯಿಸಿ ಇದೀಗ ಸುದ್ದಿ ಮಾಡಿದೆ.

ಹೌದು, ಅಮೆಜಾನ್​ನ ಇಂಗ್ಲೆಂಡ್​ ವಿಭಾಗವು ಕೇವಲ 58 ಕೋಟಿ ರೂಪಾಯಿ ತೆರಿಗೆ ಕಟ್ಟಿ ಅಲ್ಲಿನ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಅಮೆಜಾನ್​ ಕಂಪನಿ ಕಾರ್ಪೊರೇಷನ್​ ತೆರಿಗೆ ವ್ಯಾಪಾರದಿಂದ ಗಳಿಸುವ ಲಾಭದ ಮೊತ್ತದ ಮೇಲೆ ನಿಗದಿಯಾಗುತ್ತದೆ ಹೊರತಾಗಿ ವಹಿವಾಟಿನ ಮೊತ್ತದ ಮೇಲೆ ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಜೊತೆಗೆ, ಈ ಬಾರಿ ವ್ಯಾಪಾರ ಅಧಿಕವಾಗಿ ಆಗಿದ್ರೂ ನಾವು ಗಳಿಸಿದ ಲಾಭ ತೀರಾ ಕಡಿಮೆಯಾಗಿದೆ ಎಂದು ಸಹ ಹೇಳಿದೆ.

Related Tags:

Related Posts :

Category:

error: Content is protected !!