ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಆ್ಯಂಬುಲೆನ್ಸ್ ಚಾಲಕರೇ ಇಲ್ಲ, ಏಕೆ?

ಬಾಗಲಕೋಟೆ: ಜಿಲ್ಲೆಯ ಇಳಕಲ್ ನಗರದಲ್ಲಿ ಕೊರೊನಾ ದಿನೇ ದಿನೆ ಹೆಚ್ಚುತ್ತಲೆ ಇದೆ. ಆದರೆ, ಸೋಂಕಿತರನ್ನ ಕೊವಿಡ್ ಆಸ್ಪತ್ರೆಗೆ ಕರೆದೊಯ್ಯಲು  ಌಂಬುಲೆನ್ಸ್​ಗಳೇ ಇಲ್ಲದಂತ್ತಾಗಿರುವುದು ಇಳಕಲ್ ತಾಲೂಕು ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ವಿಷಯ ಏನಪ್ಪಾ ಅಂದ್ರೆ..
ಈಗಾಗಲೇ ನಗರದ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸೋಂಕು ದೃಢವಾಗಿದ್ದು,  ಸದ್ಯಕ್ಕೆ ಕ್ವಾರಂಟೈನ್​ನಲ್ಲಿ ಇದ್ದಾರೆ. ಇದರಲ್ಲಿ ಆಸ್ಪತ್ರೆಯ ಌಂಬುಲೆನ್ಸ್ ಚಾಲಕರು ಕೂಡ ಇದ್ದಾರೆ. ಹೀಗಾಗಿ, ನಗರದಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಌಂಬುಲೆನ್ಸ್ ಚಾಲಕರೇ ಇಲ್ಲದಂತ್ತಾಗಿದೆ.

ಮತ್ತೊಂದೆಡೆ ಸೋಂಕಿತರ ಕುಟುಂಬಸ್ಥರನ್ನ ಕ್ವಾರಂಟೈನ್​ಗೆ ಸ್ಥಳಾಂತರಿಸಲು ವಾಹನ ಚಾಲಕರು ಸಹ ಸಿಗುತ್ತಿಲ್ಲ. ಆದ್ದರಿಂದ, ಇಳಕಲ್ ತಾಲೂಕು ಆಡಳಿತ ಹಾಗೋ ಹೀಗೋ ಖಾಸಗಿ ವಾಹನ ಚಾಲಕರ ಮನವೊಲಿಸಿ ಅವರ ನೆರವಿನಿಂದ ಸೋಂಕಿತರನ್ನು ಕ್ವಾರಂಟೈನ್​ಗೆ ಸ್ಥಳಾಂತರ ಮಾಡುತ್ತಿದೆ.

Related Tags:

Related Posts :

Category:

error: Content is protected !!