ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ ಪಲ್ಟಿ, ಮುಂದೆ ಆಗಿದ್ದೇನು?

ಬೆಳಗಾವಿ: ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಚಿಕ್ಕೋಡಿಯ ಅಂಕಲಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕೊರೊನಾ ಸೋಂಕಿತನನ್ನು ಆಂಬುಲೆನ್ಸ್​ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಹುಕ್ಕೇರಿಯ ಹತ್ತರಗಿ ಟೋಲ್ ಬಳಿ ಅಂಬುಲೆನ್ಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ರಸ್ತೆಯಲ್ಲಿಯೇ ಪಲ್ಟಿ ಆಗಿ ಬಿದ್ದಿದೆ.

ಇದರಿಂದ ಅಂಬುಲೆನ್ಸ್​ನಲ್ಲಿದ್ದ ಕೊರೊನಾ ಸೋಂಕಿತನಿಗೆ ತೀವ್ರ ಗಾಯಗಳಾಗಿವೆ.  ಹೀಗಾಗಿ ಸೋಂಕಿತನನ್ನು ಕೂಡಲೇ ಚಿಕಿತ್ಸೆಗಾಗಿ ಬೇರೊಂದು ವಾಹನ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

 

Related Tags:

Related Posts :

Category: