‘ನಾನು Drugs ತಗೊಂಡಿಲ್ಲ ಸರ್.. ದಯವಿಟ್ಟು ನನ್ನನ್ನು ಆರೋಪಿಯನ್ನಾಗಿ ಮಾಡಬೇಡಿ’

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ CCB ವಿಚಾರಣೆಗೆ ಇಂದು ಹಾಜರಾಗಿದ್ದ ಌಂಕರ್​ ಅನುಶ್ರೀ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎಂದು ತಿಳಿದುಬಂದಿದೆ.
ಈ ಮೊದಲು ನಗರದ ಹೊರವಲಯದ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ವಿಭಾಗದ ಪೊಲೀಸ್​ ಕಚೇರಿಯಲ್ಲಿ ಌಂಕರ್​ ಅನುಶ್ರೀಗೆ ತನಿಖಾಧಿಕಾರಿಗಳು‌ ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ 9.30ರಿಂದ ಸತತ ಮೂರು ಗಂಟೆಗಳ ಕಾಲ DCP ವಿನಯ್ ಗಾಂವ್ಕರ್​ ನೇತೃತ್ವದಲ್ಲಿ ವಿಚಾರಣೆ ನಡೆಯಿತು.

ಬಳಿಕ ಌಂಕರ್​ ಅನುಶ್ರೀರನ್ನು CCB ಪೊಲೀಸರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಸಹ ಕರೆದೊಯ್ದರು. ಜೊತೆಗೆ, ಅಲ್ಲಿಯೂ ಸಹ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂಬ ಮಾಹಿತಿ ಸಿಕ್ಕಿದೆ.
ಌಂಕರ್​ ಅನುಶ್ರೀ ವಿಚಾರಣೆಯ ಇನ್​ಸೈಡ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ವಿಚಾರಣೆ ವೇಳೆ ಌಂಕರ್​ ಅನುಶ್ರೀ ಕೆಲ ಸತ್ಯ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಮೊನ್ನೆ ಮಾಧ್ಯಮಗಳಲ್ಲಿ ತರುಣ್ ಸಿಕ್ಕಿ ಮೂರು ವರ್ಷಗಳೇ ಆಗಿದೆ ಅಂತಾ ಹೇಳಿದ್ದ ಅನುಶ್ರೀ ಪೊಲೀಸ್​ ವಿಚಾರಣೆ ವೇಳೆ ಲಾಕ್​ಡೌನ್​ಗೂ ಮೊದಲು ಆತನನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರಂತೆ. ಲಾಕ್​ಡೌನ್ ಆಗಲು ಮೂರು ತಿಂಗಳ ಮುಂಚೆ ತರುಣ್ ಸಿಕ್ಕಿದ್ದ. ಆಗ ಇಬ್ಬರು ಬೆಂಗಳೂರಿನಲ್ಲಿ‌ ಮೀಟ್ ಆಗಿದ್ದೆವು ಎಂದು ಹೇಳಿದ್ದಾರಂತೆ. ಌಂಕರ್​ ಅನುಶ್ರೀನ ಕಾಲ್ ಡಿಟೇಲ್ಸ್​ನಿಂದ ಈ ಮಾಹಿತಿ ಬಯಲಾಗುವುದು ಅನ್ನೋ ಕಾರಣದಿಂದ ಆಕೆ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ದಯವಿಟ್ಟು ನನ್ನ ಆರೋಪಿಯನ್ನಾಗಿ ಮಾಡಬೇಡಿ’
ನಾನು ಡ್ರಗ್ಸ್ ತಗೊಂಡಿಲ್ಲ ಸರ್. ಈ ಇಬ್ಬರು ಇಂಥವರು ಅಂತಾ ಗೊತ್ತಿರಲಿಲ್ಲ ಸರ್. ದಯವಿಟ್ಟು ನನನ್ನು ಆರೋಪಿಯನ್ನಾಗಿ ಮಾಡಬೇಡಿ ಅಂತಾ ಌಂಕರ್​ ಅನುಶ್ರೀ ಮನವಿ ಮಾಡಿದರು ಎಂದು ತಿಳಿದುಬಂದಿದೆ. ಜೊತೆಗೆ, ನಾನು ಡ್ರಗ್ಸ್ ಸೇವಿಸಿಲ್ಲ ಅಂತಾ DCP ವಿನಯ್ ಗಾಂವ್ಕರ್​ಗೆ ಌಂಕರ್​ ಅನುಶ್ರೀ ಹೇಳಿದ್ದಾರಂತೆ.

ಇದನ್ನೂ ಓದಿ: ನಿನ್ನೆ ಚಕ್ಕರ್, ಇಂದು ಹಾಜರ್: ಪಣಂಬೂರು ಠಾಣೆಗೆ ಬಂದ ಅನುಶ್ರೀ

Related Tags:

Related Posts :

Category:

error: Content is protected !!