ಗ್ರಾಮಸ್ಥರು ಮಾಡಿದ ತಪ್ಪಿಗೆ, ಮೂಕಪ್ರಾಣಿ ಜೀವಕ್ಕೇ ಕುತ್ತು! ಎಲ್ಲಿ?

ಬಾಗಲಕೋಟೆ: ಮನುಷ್ಯ ಗೊತ್ತಿದ್ದು ಗೊತ್ತಿದ್ದು ಮಾಡಿದ ತಪ್ಪಿನಿಂದಾಗಿ ಮೂಕಪ್ರಾಣಿಯೊಂದು ಕಾಯಿಲೆಯಿಂದ ಬಳಲುತ್ತಿದೆ. ಸೂಕ್ತ ಚಿಕಿತ್ಸೆ ಸಿಗದೆ ಒಂದು ವಾರದಿಂದ ಕೊಟ್ಟಿಗೆಯಲ್ಲೇ ನರಳುತ್ತಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ತಾಲ್ಲೂಕಿನ ಹಿರೆಮ್ಯಾಗೇರಿ ಗ್ರಾಮದಲ್ಲಿ ನೆಡೆದಿದೆ.

ಆಗಿದ್ದಾದರೂ ಏನು?
ಕಳೆದ ಕೆಲ ದಿನಗಳ ಹಿಂದೆ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ರೇಲ್ವೆ ಟಿಕೆಟ್ ಕಲೆಕ್ಟರ್ ಕೋವಿಡ್ ನಿಂದ ಮೃತ ಪಟ್ಟಿದ್ದರು. ಅವರ ಅಂತ್ಯಸಂಸ್ಕಾರದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದ ಕಾರಣದಿಂದಾಗಿ ಹಿರೆಮ್ಯಾಗೇರಿ ಗ್ರಾಮವನ್ನ ಕಂಪ್ಲಿಟ್ ಸೀಲ್​ಡೌನ್ ಮಾಡಲಾಗಿದ್ದು, ಗ್ರಾಮದ ಯಾರೊಬ್ಬರು ಹೊರ ಹೋಗದಂತೆ ಪೊಲೀಸರ ಕಾವಲಿರಿಸಲಾಗಿದೆ.

ಇದರಿಂದ ಗ್ರಾಮದ ಯಾರೊಬ್ಬರು ಹೊರ ಹೋಗಲಾಗುತ್ತಿಲ್ಲ.ಆದುದರಿಂದ ಗ್ರಾಮದ ಗದ್ದೆಪ್ಪ ರ್ಯಾಗಿ ಎಂಬುವವರಿಗೆ ಸೇರಿದ ಎತ್ತೋಂದು ಕಳೆದ ಒಂದು ವಾರದಿಂದ ಹೊಟ್ಟೆ, ಕೈಕಾಲು, ಬಾವು ನೋವಿನಿಂದ ಬಳಲುತ್ತಿದೆ. ಹಾಗೂ ಮೂತ್ರ ಬಂದ್ ಆಗಿದ್ದು, ಚಿಕಿತ್ಸೆಗೆಂದು ಎತ್ತನ್ನು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ಬಿಡುತ್ತಿಲ್ಲ.

ಅಲ್ಲದೆ ಗ್ರಾಮದಲ್ಲೇ ಇರುವ ಪಶು ಆಸ್ಪತ್ರೆಗೂ ಸಹ ವೈದ್ಯರು ಬರುತ್ತಿಲ್ಲ. ಇದರಿಂದ ಚಿಂತೆಗಿಡಾಗಿರುವ ಗದ್ದೆಪ್ಪರವರಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತನ್ನು ಕಳೆದುಕೊಳ್ಳುವ ಭೀತಿ ಒಂದೆಡೆಯಾದರೆ, ಯಾರೊಂದಿಗೂ ಹೇಳಿಕೊಳ್ಳಲ್ಲಾಗದೆ ರೋದಿಸುತ್ತಿರುವ ಮೂಕ ಜೀವಿಯ ಅಳಲು ಹೇಳ ತೀರದಾಗಿದೆ.

Related Tags:

Related Posts :

Category:

error: Content is protected !!