ಪೊಲೀಸರನ್ನ ಬಿಟ್ಟು ಬಿಡದೆ ಕಾಡ್ತಿದೆ ಮಹಾಮಾರಿ! ಪಶ್ಚಿಮ ವಿಭಾಗದಲ್ಲಿ ಮತ್ತೊಂದು ಠಾಣೆ ಸೀಲ್​ಡೌನ್

ಬೆಂಗಳೂರು: ಬೆಂಗಳೂರಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸಕ್ಕೆ ಪಶ್ಚಿಮ ವಿಭಾಗದ ಮತ್ತೊಂದು ಪೊಲೀಸ್ ಠಾಣೆ ಸೀಲ್​ಡೌನ್ ಆಗಲಿದೆ. ಮೂವರು ಕೊಲೆ ಆರೋಪಿಗಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗುತ್ತೆ.

ಕೊಲೆ ಪ್ರಕರಣ ಸಂಬಂಧ 9 ಆರೋಪಿಗಳನ್ನ ಬಂಧಿಸಿದ್ದರು. ಈ ಪೈಕಿ ಮೂವರು ಆರೋಪಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಆರೋಪಿಗಳ ಸಂಪರ್ಕದಲ್ಲಿದ್ದ ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ 10 ಠಾಣೆ ಸೀಲ್‌ಡೌನ್ ಆಗಿದೆ. ಡಿಸಿಪಿ ಕಚೇರಿ, ಚಿಕ್ಕಪೇಟೆ ಎಸಿಪಿ ಕಚೇರಿ, ಉಪ್ಪಾರಪೇಟೆ, ಜೆ.ಜೆ.ನಗರ, ಕಾಮಾಕ್ಷಿಪಾಳ್ಯ, ಕೆ.ಪಿ.ಅಗ್ರಹಾರ, ಕೆಂಗೇರಿ, ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ಚಾಮರಾಜಪೇಟೆ ಠಾಣೆ ಈಗಾಗಲೇ ಸೀಲ್​ಡೌನ್ ಆಗಿದೆ. ಇಂದು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗುತ್ತೆ.

Related Tags:

Related Posts :

Category:

error: Content is protected !!