ನೀಲ ಸಾಗರದಲ್ಲಿ ನೀಳಕಾಯದ ಅನುಷ್ಕಾ ಹಾಟ್​ ಲುಕ್​ಗೆ ಎಲ್ಲಾ ಫಿದಾ!

ಲಾಕ್​ಡೌನ್​ನಿಂದ ತಮ್ಮ ನೆಚ್ಚಿನ ನಟಿಯರನ್ನ ಬೆಳ್ಳಿ ಪರದೆಯ ಮೇಲೆ ನೋಡೋಕಾಗದೆ ಕಂಗೆಟ್ಟು ಹೋಗಿದ್ದ ಪಡ್ಡೆ ಹುಡುಗರ ಮನಸ್ಸಿಗೆ ಈಗ ಕೊಂಚ ನಿರಾಳತೆ. ಅದಕ್ಕೆ ಕಾರಣ ಲಾಕ್​ಡೌನ್​ ಮೈಗೊಡವಿ ಮತ್ತೊಮ್ಮೆ ತಮ್ಮ ಸುಂದರ ನೀಳಕಾಯವನ್ನ ಪ್ರದರ್ಶಿಸಲು ಮುಂದಾಗುತ್ತಿರುವ ನಟಿಮಣಿಯರು!

ನೀಲಿ Monokiniಯಲ್ಲಿ ಕಂಗೊಳಿಸಿದ ಅನುಷ್ಕಾ..!
ಅಂತೆಯೇ, ಪ್ರತಿಷ್ಠಿತ ವೋಗ್ (Vogue) ಫ್ಯಾಷನ್​ ಮ್ಯಾಗಜೀನ್​ ಮುಖಪುಟದ ಮೇಲೆ ರಾರಾಜಿಸಲು ಬಾಲಿವುಡ್​ ಚೆಲುವೆ, ಭಾರತದ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯ ಹೃದಯ ರಮಣಿ ಅನುಷ್ಕಾ ಶರ್ಮ ಒಂದು ಹಾಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಬೇರೆ ನಟಿಯರಂತೆ ಸಾಮಾನ್ಯವಾಗಿ ಬಿಕಿನಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳದ ಅನುಷ್ಕಾ, ಗಾಢ ನೀಲಿ ಬಣ್ಣದ ಮೋನೊಕಿನಿ (Monokini) ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ನೀಲ ಸಮುದ್ರದ ತಟದಲ್ಲಿ ಮಾದಕ ನೋಟವ ಬೀರುತ್ತಾ, ಒದ್ದೆ ಮುದ್ದೆಯಾಗಿದ್ರೂ ಮೈಮಾಟದಲ್ಲೇ ಹುಡುಗಿಯರ ಮನದಲ್ಲಿ ಈರ್ಷೆ ಹಾಗೂ ಹುಡುಗರ ಬಾಯಲ್ಲಿ ಊ ಲಾ ಲಾ ಅಂತಾ ಹೇಳಿಸಿಯೇ ಬಿಟ್ರು ಅನುಷ್ಕಾ. ಅದರಲ್ಲೂ ಎಲ್ಲಾ ಕನ್ಯಾಮಣಿಗಳ ಕಣ್ಣೂ ಕುಕ್ಕಿರುವುದು ಅನುಷ್ಕಾ ವಾಲೆ ಮತ್ತು ಡಿಸೈನರ್​ ಬಳೆಗಳು. ಇವೆರಡು ಮುಂದಿನ ಫ್ಯಾಷನ್​ ಟ್ರೆಂಡ್​ ಆಗೋದ್ರಲ್ಲಿ ನೋ ಡೌಟ್​.

ಈ ಮದನಾರಿಯ ಮೋಹಕ​ ಪೋಸ್​ ಕ್ಲಿಕ್​ ಮಾಡಿರೋದು ಖ್ಯಾತ ಛಾಯಾಗ್ರಾಹಕ ಬಿಲ್ಲಿ ಕಿಡ್​. ಮುಖಪುಟದ ವಿನ್ಯಾಸ ಮಾಡಿರುವುದು ಅನಿತಾ ಶ್ರಾಫ್​ ಅಡ್ಜಾನಿಯಾ.

ಒಟ್ಟಾರೆ, ಇಷ್ಟು ದಿನ ನಿದ್ದೆಗೆಡಿಸಿದ್ದ ಹಾಳು ಕೊರೊನಾದಿಂದ ಹುಡುಗರಿಗೆ ಕೊಂಚ ರಿಲೀಫ್​ ಸಿಕ್ಕಂತಾಗಿದೆ. ಮದನಾರಿಯ ಮೈಮಾಟವನ್ನ ಕಣ್ಣುಗಳಲ್ಲಿ ತುಂಬಿಸಿಕೊಂಡ ಪಡ್ಡೆಗಳಿಗೆ ಇನ್ಮೇಲೆ ಒಳ್ಳೇ ಕನಸುಗಳು ಬೀಳೋದಂತೂ ಗ್ಯಾರಂಟಿ.

 

Related Tags:

Related Posts :

Category:

error: Content is protected !!