Apple Glass ವಿವರಗಳು ಸೋರಿಕೆ, ವಿಶೇಷತೆಗಳು ಏನು ಗೊತ್ತಾ?

ಆ್ಯಪಲ್ ಗ್ಲಾಸ್ ಎಂಬ ಅತ್ಯಾಧುನಿಕ ಹೊಚ್ಚಹೊಸ ಕನ್ನಡಕವನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಲು ಸಜ್ಜಾಗಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ಅದು ಸಾಧ್ಯವಾಗಿಲ್ಲ. ಈ ಮಧ್ಯೆ, ಜಾನ್ ಪ್ರೊಸರ್ ಎಂಬ ಟೆಕ್ ಪ್ರೇಮಿ ಆ್ಯಪಲ್ ಗ್ಲಾಸ್ ಕುರಿತಾದ ತಾಂತ್ರಿಕ ವಿವರಗಳಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ಆ್ಯಪಲ್ ಗ್ಲಾಸ್​ನ ವಿಶೇಷತೆ, ಅದರ ವಿನ್ಯಾಸದ ಕುರಿತು ವಿವರಿಸಿದ್ದಾರೆ. ಆ್ಯಪಲ್ ವಾಚ್ ಹೇಗೆ ಸಂವಹನ ನಡೆಸುತ್ತದೆಯೋ ಅದೇ ರೀತಿ ಐಫೋನ್‌ ಕನೆಕ್ಟ್ ಮಾಡುವ ಮೂಲಕ ರಿಯಾಲಿಟಿ ಸ್ಮಾರ್ಟ್ ಆ್ಯಪಲ್ ಗ್ಲಾಸ್ ಕೂಡ ಆಪರೇಟ್ ಮಾಡಬಹುದು.

ಇದು ನೋಡಲು ಕಣ್ಣಿಗೆ ಹಾಕುವ ಗ್ಲಾಸ್ ಮಾದರಿಯಲ್ಲಿದೆ. ಇದನ್ನು ಐಫೋನ್​ಗೆ ಕನೆಕ್ಟ್ ಮಾಡಬೇಕು. ಅದು ವೈರ್​ಲೆಸ್ ಕನೆಕ್ಟರ್ ಆಗಿರುತ್ತದೆ. ಈ ಆ್ಯಪಲ್ ಕನ್ನಡಕವನ್ನು ಐಫೋನ್ ಮೂಲಕ ನಿಯಂತ್ರಿಸಲಾಗುತ್ತದೆ. ಇದನ್ನು ಹಾಕಿಕೊಂಡಾಗ ಕಣ್ಣ ಮುಂದೆಯೇ ಎಲ್ಲಾ ಮಾಹಿತಿ ಕಾಣಿಸುತ್ತಿರುವ ರೀತಿ ಭಾಸವಾಗುತ್ತದೆ. ಹಾಗೂ ಎಲ್ಲಾ ಡೇಟಾ ಮ್ಯಾಪ್ ಕನ್ನಡಕದಲ್ಲಿ ಡಿಸ್​ಪ್ಲೇ ಆಗುತ್ತದೆ. ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಕೇವಲ 499 ಡಾಲರ್ಸ್​ನಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ಆಪಲ್ ಗ್ಲಾಸ್​ನ ವಿಶೇಷತೆಗಳು:
-ಕನ್ನಡಕದ ಬಲಭಾಗದ ಫ್ರೇಮ್​ನಲ್ಲಿ ಲಿಡಾರ್ ಅನ್ನು ಸಂಯೋಜಿಸಲಾಗಿದೆ, ಆದರೆ ಮೂಲಮಾದರಿಯಲ್ಲಿ ಬೇರೆ ಯಾವುದೇ ಕ್ಯಾಮೆರಾ ಅಳವಡಿಸಿಲ್ಲ.
-ಆ್ಯಪಲ್ ಗ್ಲಾಸ್ ವೈರ್​ಲೆಸ್ ಚಾರ್ಜಿಂಗ್ ಆಗಿದ್ದು, ಪ್ಲಾಸ್ಟಿಕ್ ಸ್ಟ್ಯಾಂಡ್ ನೀಡಲಾಗುತ್ತದೆ.
-ಕನ್ನಡಕದ ಎರಡೂ ಲೆನ್ಸ್​ಗಳಲ್ಲಿ ಮಾಹಿತಿ ಪ್ರದರ್ಶನಗೊಳ್ಳುತ್ತೆ. ಬಳಕೆದಾರನ ಸಂಜ್ಞೆಗಳ ಮೂಲಕ ಸಾಧನವನ್ನು ನಿಯಂತ್ರಿಸಬಹುದು.
-ಪ್ರೊಸಸರ್ ಪ್ರಕಾರ ಈ ಡಿವೈಸ್ QR ಕೋಡ್​ಗಳನ್ನ ಸ್ಕ್ಯಾನ್ ಮಾಡಬಲ್ಲದು.

ಆ್ಯಪಲ್ ಗ್ಲಾಸ್​ನನ್ನು 2020 ರ ನಾಲ್ಕನೇ ತ್ರೈಮಾಸಿಕ ಅಥವಾ 2021 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿತ್ತು. ಕೊರೊನಾ ಕಾಟದಿಂದಾಗಿ ಅದು ಮುಂದೂಡಲಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more