ಕೊರೊನಾ ಬಂದ್ರೆ ಅರ್ಧ ಎಕರೆ ಜಮೀನು ಢಮಾರ್ -ಶಿವಲಿಂಗೇಗೌಡರ ‘ವೈರಸ್​’ ಬಾತ್​!

ಬೆಂಗಳೂರು: ಲಾಕ್‌ಡೌನ್‌ಗೆ ಕರೆ ಕೊಟ್ಟಾಗ ಹಾಸನ ಜಿಲ್ಲೆಯಲ್ಲಿ ಒಂದೇ ಒಂದು ಕೊವಿಡ್​ ಕೇಸ್ ಇರಲಿಲ್ಲ. ಆಗ ಮುಂಬೈನಿಂದ ಬರುವವರನ್ನು ಟೆಸ್ಟ್ ಮಾಡಬೇಕೆಂದಿದ್ದೆ. ಆದರೆ, ಆಗ ಕೊರೊನಾ ಮಹತ್ವ ಕಳೆದುಕೊಂಡಿದೆ ಅಂದಿದ್ದರು ಎಂದು ವಿಧಾನಸಭೆಯಲ್ಲಿ ಅರಸೀಕೆರೆ JDS ಶಾಸಕ ಶಿವಲಿಂಗೇಗೌಡ ಹೇಳಿದರು.
ಮಹಾರಾಷ್ಟ್ರದಿಂದ ಜನ ಬರುತ್ತಿದ್ದಂತೆ ಸೋಂಕು ಹೆಚ್ಚಾಯಿತು. ಬಳಿಕ ನನ್ನ ಪತ್ನಿಗೆ ಕೊರೊನಾ ಸೋಂಕು ಬಂದಿದೆ ಎಂದು ಹೇಳಿದ್ದರು. ಆಗ ಲ್ಯಾಬ್‌ಗೆ ಹೋಗಿ ಕೊರೊನಾ ವೈರಸ್ ಹೇಗಿದೆ ತೋರಿಸು ಅಂತಾ ಕೇಳಿದ್ದೆ. ಆಮೇಲೆ, ನನಗೆ ಕೊರೊನಾ ಬಂದಾಗಲೇ ಅದು ಏನೆಂದು ಗೊತ್ತಾಯಿತು. ಚಿಕ್ಕವಯಸ್ಸಿನಲ್ಲಿ ಬಿದ್ದಿದ್ದ ಹಳೇ ನೋವೆಲ್ಲಾ ನೆನಪಿಗೆ ಬಂತು ಎಂದು ತಮಗಾದ ಅನುಭವವನ್ನು ಹಂಚಿಕೊಂಡರು.

ಭಗವಂತನೇ ಮೆಡಿಸಿನ್ ಕಂಡುಹಿಡಿಯುವಂತೆ ಮಾಡ್ಬೇಕು. ಜನರ ಕಷ್ಟಕ್ಕೆ ಶಾಸಕರು ಸ್ಪಂದಿಸಬೇಕು. ಕೊರೊನಾ ಬಂದರೆ ಅರ್ಧ ಎಕರೆ ಜಮೀನು ಮಾರಬೇಕಾಗುತ್ತದೆ. ಅದರಲ್ಲೂ ಖಾಸಗಿ ಆಸ್ಪತ್ರೆಗೆ ಹೋದರೇ ಚಿಕಿತ್ಸೆಯ ಖರ್ಚಿಗೆ ಜಮೀನು ಮಾರಲೇಬೇಕು. ಕೊರೊನಾ ಬರೋದು ಒಂದೇ, ಅರ್ಧ ಎಕರೆ ಢಮಾರ್ ಆಗೋದು ಒಂದೇ ಎಂದು ಶಿವಲಿಂಗೇಗೌಡರು ಹೇಳಿದರು.

‘ಮತ್ಯಾಕೆ ನನ್ನಿಂದ 1.60 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡ್ರು’
ಪಾಪ ನರ್ಸ್‌ಗಳು, ಡಾಕ್ಟರ್‌ಗಳು ಕೆಲಸ ಮಾಡುತ್ತಿದ್ದಾರೆ. ನಾನು ಬಿಬಿಎಂಪಿ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ಹಾಗಾಗಿ, ಆಸ್ಪತ್ರೆಯವರು ಅರ್ಧ ಬಿಲ್ ಮಾತ್ರ ತೆಗೆದುಕೊಂಡರು. ಆಸ್ಪತ್ರೆ ಫುಲ್ ಬಿಲ್ ನೋಡಿದ್ರೇ ನನಗೆ ಭಯ ಆಗುತ್ತಿತ್ತು ಎಂದು ವಿಧಾನಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅರ್ಧ ಬಿಲ್ ಅಂದ್ರಲ್ಲ ಏನದು ಎಂದು ಪ್ರಶ್ನಿಸಿದರು. ಬಿಬಿಎಂಪಿ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗೆ ಹೋದರೆ ಸರ್ಕಾರವೇ ಪೂರ್ತಿ ಹಣ ಪಾವತಿಸುತ್ತದೆ ಎಂದು ಸುಧಾಕರ್ ಹೇಳಿದರು.

ಸಚಿವರ ಮಾತಿಗೆ ಶಾಸಕ ಶಿವಲಿಂಗೇಗೌಡ ಮತ್ಯಾಕೆ ಆಸ್ಪತ್ರೆಯವರು ನನ್ನಿಂದ 1.60 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡ್ರು ಅಂತಾ ಪ್ರಶ್ನಿಸಿದರು. ಈ ನಡುವೆ ಡಾ.ಕೆ.ಸುಧಾಕರ್ ಮಾತಿಗೆ ವಿಪಕ್ಷಗಳ ಶಾಸಕರು ತಮ್ಮ ಆಕ್ರೋಶ ಹೊರಹಾಕಿದರು. ನಿಮ್ಮ ಆದೇಶಗಳು ಕೇವಲ ಪೇಪರ್‌ಗಷ್ಟೇ ಸೀಮಿತ. ನಾವೂ ದುಡ್ಡು ಪಾವತಿಸಿ ಚಿಕಿತ್ಸೆ ಪಡೆದಿದ್ದೇವೆಂದು ಸದಸ್ಯರು ಆಗ ತಮ್ಮ ಅಳಲನ್ನು ಸಹ ತೋಡಿಕೊಂಡರು.

Related Tags:

Related Posts :

Category:

error: Content is protected !!