ಕಲಾವಿದನ ಕೈಚಳಕ: ಮರಳಿನ ಮೇಲೆ ಅರಳಿತು ರಾಮ ಮಂದಿರ, ಎಲ್ಲಿ?

ಧಾರವಾಡ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಶಿಲಾನ್ಯಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ತಮ್ಮದೇ ರೀತಿಯಲ್ಲಿ ಭಗವಂತನಿಗೆ ಕಾಣಿಕೆ ಅರ್ಪಿಸುತ್ತಿದ್ದಾರೆ.

 

ಅಂತೆಯೇ, ಧಾರವಾಡದ ಕಲಾವಿದ ಮಂಜುನಾಥ್ ಸಹ  ಒಬ್ಬರು. ನಗರದ ಕೆಲಗೇರಿ ಬಡಾವಣೆಯ ನಿವಾಸಿಯಾಗಿರುವ ಮಂಜುನಾಥ್ ಹಿರೇಮಠ ರಾಮ ಮಂದಿರದ ವಿನ್ಯಾಸವನ್ನು ಮರಳಿನಲ್ಲಿ ಸುಂದರವಾಗಿ ಬಿಡಿಸಿದ್ದಾರೆ.

ನಗರದ ದೊಡ್ಡ ನಾಯಕನ ಬಡಾವಣೆಯಲ್ಲಿ ಬಿಡಿಸಿರುವ ಈ ಮರಳು ಶಿಲ್ಪಕ್ಕೆ ಒಂದು ಟಿಪ್ಪರ್ ಲಾರಿಯಷ್ಟು ಮರಳನ್ನು ಬಳಸಲಾಗಿದೆ. ಬೆಳಗ್ಗೆ 5:30ಕ್ಕೆ ಕಲಾಕೃತಿಯನ್ನು ಬಿಡಿಸುವ ಕೆಲಸ ಆರಂಭಿಸಿದ ಮಂಜುನಾಥ್​ ರಾತ್ರಿ 10:30ಕ್ಕೆ ಮುಗಿಸಿದ್ದಾರೆ. ಮರಳು ಶಿಲ್ಪವು ಸುಮಾರು 6 ಅಡಿ ಎತ್ತರವಿದ್ದು 10 ಅಡಿ ಅಗಲವಿದೆ.

Related Tags:

Related Posts :

Category: