‘ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಗಳ ಮುಖಂಡರು ಕುಮ್ಮಕ್ಕು ನೀಡಿದ್ದಾರೆ’

ಬೆಂಗಳೂರು:ನಿನ್ನೆ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಪೂರ್ವನಿಯೋಜಿತವಾಗಿದ್ದು, ಗಲಭೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಯ ಮುಖಂಡರು ಕುಮ್ಮಕ್ಕು ನೀಡಿದ್ದಾರೆಂದು ಆರೋಪ ಮಾಡಿದ್ದಾರೆ.

ಕೃತ್ಯಕ್ಕೂ ಮುನ್ನ ಕಿಡಿಗೇಡಿಗಳು ಮೊದಲು ನಾಗವಾರದ ಅರಬಿಕ್ ಕಾಲೇಜ್ ಬಳಿ ಸಭೆ ಸೇರಿದ್ದಾರೆ. ನಂತರ ವೆಂಕಟೇಶ್ವರ ರಸ್ತೆ ಹಾಗೂ ಬಬಲ್​ಗಮ್ ಫ್ಯಾಕ್ಟರಿ ಬಳಿ ಕೂಡ ಸಭೆ ಸೇರಿದ್ದಾರೆ. ನಂತರ, ಪೊಲೀಸ್ ಠಾಣೆಗೆ ನುಗ್ಗಿ ಏಕಾಏಕಿ ಗಲಾಟೆ ಮಾಡಿದ್ದಾರೆ. ಗಲಭೆಕೋರರು ತಮ್ಮ ಮನೆಗಳಿಂದಲೇ ಕಲ್ಲುಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕೆಲಸ ಶಾಂತಿಯುತವಾಗಿ ನೆರವೇರಿದಕ್ಕೆ ಅರಾಜಕತೆ ಸೃಷ್ಟಿಸಲು ಈ ಕೆಲಸ ಮಾಡಿದ್ದಾರೆ. ಹಾಗಾಗಿ ಇವರ ಮೇಲೆ ಗೂಂಡಾ ಕಾಯ್ದೆ ಅಡಿ ಕೇಸ್​ ಹಾಕಬೇಕು. ಜೊತೆಗೆ ಆಗಿರುವ ನಷ್ಟವನ್ನು ಈ ಗಲಭೆಕೋರರಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Related Tags:

Related Posts :

Category: