ಕೊರೊನಾದಿಂದ ರಾಜ್ಯದಲ್ಲಿ ಇವತ್ತು ಒಂದೇ ದಿನ 100 ಜನರ ಸಾವು

ಬೆಂಗಳೂರು: ಕಿಲ್ಲರ್‌ ಕೊರೊನಾಗೆ ರಾಜ್ಯದಲ್ಲಿ ಇವತ್ತು ಬರೋಬ್ಬರಿ 100 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗ 2,804ಕ್ಕೇರಿದೆ. ಹಾಗೇನೆ ರಾಜಧಾನಿ ಬೆಂಗಳೂರಲ್ಲಿ ಇವತ್ತು ಕೊರೊನಾಗೆ 29ಜನರು ಬಲಿಯಾಗಿದ್ದಾರೆ. ಇದರೊಂದಿಗೆ ಕೊರೊನಾದಿಂದ ಸಾವನ್ನಪಿರುವವರ ಸಂಖ್ಯೆ 1,163 ರಷ್ಟಾಗಿದೆ.

ಹೊಸದಾಗಿ ಇವತ್ತು ರಾಜ್ಯದಲ್ಲಿ 5,619 ಜನರಿಗೆ ಕೊರೊನಾ ಮಾರಿ ವಕ್ಕರಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,51,449ಕ್ಕೇ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಲ್ಲಿ 1,848 ಜನರಿಗೆ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ ಈಗ 64,881 ಕ್ಕೇರಿಕೆಯಾಗಿದೆ.

ಆಸ್ಪತ್ರೆಯಿಂದ ಇವತ್ತು 74,679 ಜನರು ಗುಮುಖರಾಗಿ ಬಿಡುಗಡೆಯಾಗಿದ್ದಾರೆ. 73,958 ರಷ್ಟು ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಆಸ್ಪತ್ರೆಯಿಂದ 30,960 ಜನರು ಡಿಸ್‌ಚಾರ್ಜ್‌ ಆಗಿದ್ದರೇ, 32,757 ರಷ್ಟು ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Related Tags:

Related Posts :

Category: