ರಾಜ್ಯದಲ್ಲಿ ಇಂದು ಒಂದೇ ದಿನ ಕೊರೊನಾಗೆ 113 ಜನರ ಸಾವು, 7,883 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕಿಗೆ 113 ಜನರ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 3,510ಕ್ಕೇರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 23 ಜನರ ಬಲಿಯಾಗಿದ್ದು, ಮೈಸೂರು ಜಿಲ್ಲೆಯಲ್ಲಿ 11 ಜನರು, ಬಳ್ಳಾರಿ ಜಿಲ್ಲೆಯಲ್ಲಿ 9 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಹೊಸದಾಗಿ ಇವತ್ತು ರಾಜ್ಯದಲ್ಲಿ 7,883ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ ಬೆಂಗಳೂರು ನಗರ 2802, ಬಳ್ಳಾರಿ 635, ಮೈಸೂರು 544, ಬೆಳಗಾವಿ 314, ಧಾರವಾಡ 269, ಉಡುಪಿ 263, ಹಾಸನ 258, ದಾವಣಗೆರೆ 239, ದಕ್ಷಿಣ ಕನ್ನಡ 229 ಮತ್ತು ಕೊಪ್ಪಳದಲ್ಲಿನ 202 ಜನರು ಸೇರಿದ್ದಾರೆ.

ಒಟ್ಟು ಸೋಂಕಿತರ ಪೈಕಿ 1,12,633 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇನ್ನುಳಿದ 80,343 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Related Tags:

Related Posts :

Category: