ಸತತ ಮಳೆ, ಹೆಚ್ಚಿದ ಒಳಹರಿವು KRS‌ ಡ್ಯಾಂನಿಂದ 30,000 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ಸತತವಾಗಿ ಸುರಿಯುತ್ತಿರುವ ಮಳೆಗೆ ಕಾವೇರಿ ನದಿಯ ಒಳ ಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಕೃಷ್ಣರಾಜ ಸಾಗರ ಜಲಾಶಯದಿಂದ ನೀರನ್ನು ಹೊರ ಬೀಡಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆಸ್ಎಸ್‌ ಡ್ಯಾಂನಲ್ಲಿ ಸತತ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. 128.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಡ್ಯಾಂನಲ್ಲಿ ಈಗಾಗಲೇ 115.35 ಅಡಿಯಷ್ಟು ನೀರು ಭರ್ತಿಯಾಗಿದೆ. ಜೊತೆಗೆ ಒಳ ಹರಿವಿನ ಪ್ರಮಾಣ 55,454 ಕ್ಯೂಸೆಕ್‌ ನಷ್ಟಿದೆ.

ಹೀಗಾಗಿ ಕೆಆರ್‌ಎಸ್‌ ಅಧಿಕಾರಿಗಳು 30,000 ಕ್ಯೂಸೆಕ್‌ ನೀರನ್ನು ಡ್ಯಾಂನಿಂದ ಹೊರ ಬೀಡಲಾರಂಭಿಸಿದ್ದಾರೆ. ಈ ಸಂಬಂಧ  ನದಿ ಪಾತ್ರದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ಕೊಡಲಾಗಿದೆ. ನೀರನ್ನು ಡ್ಯಾಂನಿಂದ ಹೊರ ಬಿಡುವ ಪ್ರಮಾಣ ರಾತ್ರಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

Related Tags:

Related Posts :

Category: