ರಾಜ್ಯದಲ್ಲಿ ಇಂದು ಒಂದೇ ದಿನ 5,172 ಜನರಿಗೆ ಕೊರೊನಾ ಸೋಂಕು, 98 ಜನರ ಸಾವು

ಬೆಂಗಳೂರು: ಕೊರೊನಾ ಹೆಮ್ಮಾರಿಯ ರುದ್ರ ನರ್ತನ ರಾಜ್ಯದಲ್ಲಿ ಮುಂದುವರಿದಿದೆ. ರಾಜ್ಯದಲ್ಲಿ ಇಂದು ಒಂದೇ ದಿನ ಹೊಸದಾಗಿ 5,172 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಡಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,29,287ಕ್ಕೇರಿಕೆಯಾಗಿದೆ.

ಕೊರೊನಾ ಸೋಂಕಿನಿಂದ ಇಂದು ರಾಜ್ಯದಲ್ಲಿ 98 ಜನರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 2,412ಕ್ಕೇರಿಕೆಯಾಗಿದೆ. ಇನ್ನು ಸೋಂಕಿತರ ಪೈಕಿ 53,648 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 73,219 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ಇಂದು 1,852 ಜನರಿಗೆ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಇದರೊಂದಿಗೆ ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 57,396ಕ್ಕೇರಿಕೆಯಾಗಿದೆ. ಹಾಗೇನೆ ಇವತ್ತು ಬೆಂಗಳೂರಿನಲ್ಲಿ 27 ಜನರು ಬಲಿಯಾಗಿದ್ದು, ಸಾವನ್ನಪಿರುವವರ ಸಂಖ್ಯೆ 1,056ಕ್ಕೇರಿಕೆಯಾಗಿದೆ.

ಬೆಂಗಳೂರಿನಲ್ಲಿ ಒಟ್ಟು 57,396 ಸೋಂಕಿತರ ಪೈಕಿ 18,579 ಜನ ಗುಣಮುಖರಾಗಿದ್ದು, 37,760 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Related Tags:

Related Posts :

Category:

error: Content is protected !!