ರಾಜ್ಯದಲ್ಲಿಂದು ಒಂದೇ ದಿನ 5503 ಜನರಿಗೆ ಕೊರೊನಾ ಸೋಂಕು, 92 ಸಾವು

ಬೆಂಗಳೂರು: ರಾಜ್ಯದಲ್ಲಿ ಕಿಲ್ಲರ್‌ ಕೊರೊನಾ ಹಾವಳಿ ಮುಂದುವರಿದಿದೆ. ಹೊಸದಾಗಿ ಇವತ್ತು ರಾಜ್ಯದಲ್ಲಿ 5503 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,504ಕ್ಕೇರಿಕೆಯಾಗಿದೆ. ಹಾಗೇನೆ ಬೆಂಗಳೂರಿನಲ್ಲಿ ಇಂದು ಹೊಸದಾಗಿ 2270 ಜನರಿಗೆ ಕೊರೊನಾ ಸೋಂಕು ತಗಲಿರೋದು ಪತ್ತೆಯಾಗಿದೆ.

ಇನ್ನು ಕೊರೊನಾದಿಂದಾಗಿ ಇವತ್ತು ರಾಜ್ಯದಲ್ಲಿ 92 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿಯೇ 30 ಜನರು ಮತ್ತು ಕಲಬುರಗಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 2,147ಕ್ಕೇರಿದೆ.

ಕೊರೊನಾದಿದಂದ ಗುಣಮುಖರಾಗಿ ಇವತ್ತು 42,901 ಜನರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಇನ್ನುಳಿದಂತೆ 67,448 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

29-07-2020 HMB Kannada

Related Tags:

Related Posts :

Category:

error: Content is protected !!