ಕೊರೊನಾ ರುದ್ರನರ್ತನ ನಿಲ್ಲುವ ಲಕ್ಷಣಗಳೇ ಇಲ್ಲ, ರಾಜ್ಯದಲ್ಲಿಂದು ಸೋಂಕಿಗೆ 70 ಮಂದಿ ಬಲಿ

ಬೆಂಗಳೂರು: ಕೊರೊನಾದ ರುದ್ರನರ್ತನ ನಿಲ್ಲುವ ಲಕ್ಷಣಗಳೇ ಇಲ್ಲ. ಕೋವಿಡ್‌-19 ಹೆಮ್ಮಾರಿಗೆ ರಾಜ್ಯದಲ್ಲಿ ಇಂದು ಬೆಂಗಳೂರಿನಲ್ಲಿ 23 ಮಂದಿ ಸೇರಿದಂತೆ ರಅಜ್ಯದಲ್ಲಿ ಒಟ್ಟು 70 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ರಾಜ್ಯದಲ್ಲಿ ಇಂದು 20,288 ಜನರಿಗೆ ಕೊರೊನಾ ಟೆಸ್ಟ್‌ ಮಾಡಲಾಗಿದ್ದು, ಹೊಸದಾಗಿ 2798 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಬೆಂಗಳೂರಿನಲ್ಲಿಯೇ 1533 ಜನರು ಸೋಂಕಿತರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36,216ಕ್ಕೇರಿಕೆಯಾಗಿದ್ರೆ, ಬೆಂಗಳೂರಿನಲ್ಲಿ 16,862 ಜನರು ಸೋಂಕಿತರಾಗಿದ್ದಾರೆ.

ಕೊರೊನಾಗೆ ಇಂದು ಬಲಿಯಾದ 70ಜನರೊಂದಿಗೆ ಇದುವರೆಗೆ ಕೊರೊನಾದಿಂದ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 613ಕ್ಕೇರಿದೆ. ಇದರಲ್ಲಿ ರಾಜಧಾನಿ ಬೆಂಗಳೂರಿನಲ್ಲಿಯೇ ಈವರೆಗೆ 229 ಜನರ ಸಾವನ್ನಪ್ಪಿದ್ದಾರೆ. ಹಾಗೇನೇ ರಾಜ್ಯದಲ್ಲಿಂದು ಬೆಂಗಳೂರಿನ 404 ಜನರು ಸೇರಿ 882 ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಸಚಿವ ಡಾ. ಕೆ ಸುಧಾಕರ್‌ ಹೇಳಿದ್ದಾರೆ.

Related Tags:

Related Posts :

Category:

error: Content is protected !!