ವಿಶಿಷ್ಟ ದಾಖಲೆ ಬರೆದ ಸ್ಮಿತ್: 1 ರನ್ ಗಳಿಸೋಕೆ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?

, ವಿಶಿಷ್ಟ ದಾಖಲೆ ಬರೆದ ಸ್ಮಿತ್: 1 ರನ್ ಗಳಿಸೋಕೆ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಸ್ಟೀವ್ ಸ್ಮಿತ್ ನಿಧಾನಗತಿಯ ಬ್ಯಾಟಿಂಗ್ ಮಾಡಿ, ವಿಶಿಷ್ಟ ದಾಖಲೆ ಬರೆದಿದ್ದಾರೆ. ಸ್ಮಿತ್ ಮೊದಲ ರನ್ ಗಳಿಸೋದಕ್ಕೆ ಬರೋಬ್ಬರಿ 39ಎಸೆತ ಹಾಗೂ 46 ನಿಮಿಷಗಳನ್ನ ತೆಗೆದುಕೊಂಡ್ರು. ನಿಧಾನಗತಿ ಬ್ಯಾಟಿಂಗ್ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್​ಮನ್ ಅನ್ನೋ ಖ್ಯಾತಿಗೆ ಸ್ಮಿತ್ ಭಾಜನರಾದ್ರು.

ನಿಷೇಧದ ಭೀತಿಯಲ್ಲಿ ಕೆಕೆಆರ್ ಆಟಗಾರರು:
ವಯಸ್ಸಿನ ವಂಚನೆಗೆ ಸಂಬಂಧಿಸಿದಂತೆ ದೆಹಲಿ ಆಟಗಾರ ಮಂಜೋತ್ ಕಲ್ರಾ ಈಗಾಲೇ, ರಣಜಿ ಟೂರ್ನಿಯಿಂದ ನಿಷೇಧಗೊಂಡಿದ್ದಾರೆ. ಇದ್ರ ಬೆನ್ನಲ್ಲೇ ನಿತಿಶ್ ರಾಣಾ ಕೂಡ ನಿಷೇಧ ಭೀತಿಯನ್ನ ಎದುರಿಸ್ತಿದ್ದಾರೆ. ಇಬ್ಬರು ಐಪಿಎಲ್​ನಲ್ಲಿ ಕೆಕೆಆರ್ ತಂಡವನ್ನ ಪ್ರತಿನಿಧಿಸುತ್ತಿದ್ದ, ಇಬ್ಬರ ಮೇಲೂ ನಿಷೇಧದ ತೂಗುಗತ್ತಿ ಇದೆ.

ಕಿವೀಸ್ ಪರದಾಟ:
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ, ಆಸಿಸ್ ವಿಕೆಟ್ ಪಡೆಯೋದಕ್ಕೆ ಪರದಾಡ್ತಿದೆ. ಮೊದಲ ದಿನ ಆಸಿಸ್ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಕಂಗಾಲಾದ ಕಿವೀಸ್, ಒಂದೊಂದು ವಿಕೆಟ್ ಪಡೆಯೋಕೆ ಹರಸಾಹಸ ಮಾಡ್ತು. ಮೊದಲ ದಿನದಾಟದಂತ್ಯಕ್ಕೆ ಆಸಿಸ್ 3ವಿಕೆಟ್ ಕಳೆದುಕೊಂಡು 283ರನ್ ಗಳಿಸಿದೆ.

194ಕ್ಕೆ ಮುಂಬೈ ಆಲೌಟ್:
ಮುಂಬೈ ವಿರುದ್ಧದ ರಣಜಿ ಟ್ರೋಫಿಯ ಮೊದಲ ದಿನ ಕರ್ನಾಟಕ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕೇವಲ 194ರನ್​ಗಳಿಗೆ ಆಲೌಟ್ ಆಗಿದೆ. ಸೂರ್ಯಕುಮಾರ್ ಯಾದವ್ 77ರನ್ ಗಳಿಸಿದ್ರೆ, ಕರ್ನಾಟಕ ಪರ ಕೌಶಿಕ್ 3ವಿಕೆಟ್ ಪಡೆದ್ರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!