ಸುವೇಂದು ಅಧಿಕಾರಿ ಟಿಎಂಸಿಯ ಮಾಜಿ ನಾಯಕರಾಗಿದ್ದು, ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತನಾಗಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು.
Indian Air Force: ಆನ್ಲೈನ್ನಲ್ಲಿ ನೋಂದಣಿ ಪ್ರಕ್ರಿಯೆ ಜೂ.1ರಿಂದ ಶುರುವಾಗಲಿದ್ದು, ಜೂ.30ರವರೆಗೆ ಅವಕಾಶ ಇರುತ್ತದೆ. ಆಸಕ್ತಿ ಇರುವ ಅರ್ಹರು afcat.cdac.in. ಗೆ ಭೇಟಿ ನೀಡಬೇಕು.
ಕೊವಿಡ್ 19 ವಿರುದ್ಧ ಹೋರಾಡುತ್ತೇವೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ ಕೊರೊನಾ ಭಯದಿಂದ ಯಾರೊಬ್ಬರೂ ರೋಗಿಗಳನ್ನು ಮುಟ್ಟಲು ಬರುವುದಿಲ್ಲ ಎಂದು ಮಗುವಿನ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಡೋಪಾಧ್ಯಾಯ ಅವರನ್ನು ವರ್ಗಾವಣೆ ಮಾಡಿ ಕೇಂದ್ರ ಆದೇಶ ಹೊರಡಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ತಾವು ಅವರನ್ನು ಕಳಿಸುವುದಿಲ್ಲ ಎಂದು ಹೇಳಿದ್ದರು.
ಮಹಿಳೆ ನೀಡಿದ ದೂರಿನ ಅನ್ವಯ 9 ಗಣ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲ ಬಾಲಿವುಡ್ ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಆಗಿದ್ದಾರೆ. ಇನ್ನು ಈ ರೂಪದರ್ಶಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕಿಕೊಂಡಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಮೂಲವನ್ನು ಕಂಡುಹಿಡಿಯಲು ಡಬ್ಲ್ಯೂಎಚ್ಒಗೆ ನಾವು ಯಾವಾಗಲೂ ಬೆಂಬಲಿಸುತ್ತೇವೆ. ಈ ವಿಚಾರದಲ್ಲಿ ಪಾರದರ್ಶಕತೆ ತುಂಬ ಮುಖ್ಯ ಎಂದು ಭಾರತ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ.
ಆರ್ಸಿಸಿಯ ಒಂದು ಪದರ ಹಾಕಲು 4-5ದಿನ ತೆಗೆದುಕೊಳ್ಳುತ್ತದೆ. ಸದ್ಯ ಸ್ಥಳದಲ್ಲಿ ಹಲವು ಇಂಜಿನಿಯರ್ಗಳು, ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಇರಬೇಕೆಂದರೆ ಉತ್ತಮ ಕೊಬ್ಬಿನ ಅಂಶವೂ ಸರಿಯಾದ ಪ್ರಮಾಣದಲ್ಲಿ ಇರಬೇಕು. ಅದರಲ್ಲೂ ದೇಹಕ್ಕೆ ಒಮೆಗಾ-3 ಕೊಬ್ಬಿನ ಆಮ್ಲಗಳ ಅಗತ್ಯ ಹೆಚ್ಚಾಗಿರುತ್ತದೆ.