ಬಣ್ಣ ಬಣ್ಣದ ಕೇಕ್ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!
ಕ್ರಿಸ್ಮಸ್, ಹೊಸವರ್ಷದ ಸಂಭ್ರಮಾಚರಣೆ ಸೇರಿ ಪಾರ್ಟಿಗಳಲ್ಲಿ ನಾವು ಸೇವಿಸುವ ಕೇಕ್ ಜೀವಕ್ಕೇ ಕುತ್ತು ತರಬಹುದು ಎಂಬ ಆಘಾತಕಾರಿ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಕೇಕ್ಗಳ ತಯಾರಿ ವೇಳೆ ಕೃತಕ ಬಣ್ಣಗಳ ಬಳಕೆ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಲರ್ ಕಲರ್ ಕೇಕ್ಗಳ ಖರೀದಿಗೂ ಮುನ್ನ ಎಚ್ಚರವಿರಲಿ ಎಂದಿದ್ದಾರೆ.
- Vinay Kashappanavar
- Updated on: Dec 24, 2025
- 8:25 pm
ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್ ಆರಂಭಕ್ಕೆ ನಿರ್ಧಾರ
ಮಂಗನ ಕಾಯಿಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ಮತ್ತೊಂದು ಲ್ಯಾಬ್ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಶಿವಮೊಗ್ಗದಲ್ಲಿರುವ ಹಾಲಿ ಲ್ಯಾಬ್ ಜೊತೆಗೆ ಮತ್ತೊಂದು ಪರೀಕ್ಷಾ ಕೇಂದ್ರ ಆರಂಭವಾದಲ್ಲಿ ಮಂಗನ ಕಾಯಿಲೆ ಗುರುತಿಸುವಿಕೆ ಮತ್ತು ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಇದು ಸಹಕಾರಿಯಾಗಲಿದೆ. ಕರ್ನಾಟಕದಲ್ಲಿ ಇದುವರೆಗೆ 13 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
- Vinay Kashappanavar
- Updated on: Dec 24, 2025
- 7:45 pm
ಕೊವಿಡ್ನಂತೆ ಆತಂಕ ಸೃಷ್ಟಿಸಿದ ILI-ಸಾರಿ ಕೇಸ್ ಏರಿಕೆ: ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ
ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ILI, SARI ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡಿವೆ. ಸೀಸನಲ್ ಫ್ಲೂ ಭೀತಿಯಿಂದ ಆರೋಗ್ಯ ಇಲಾಖೆಗೆ ಟೆನ್ಷನ್ ಶುರುವಾಗಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಪರೀಕ್ಷೆಗಳನ್ನು ಹೆಚ್ಚಿಸಲು ಸೂಚಿಸಿದೆ. ಬಿಸಿ ನೀರು, ಶುಚಿತ್ವ ಕಾಪಾಡಲು, ಆರೋಗ್ಯಕರ ಆಹಾರ ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ.
- Vinay Kashappanavar
- Updated on: Dec 22, 2025
- 10:01 pm
ಚಳಿಗಾಲದ ಎಫೆಕ್ಟ್: ಸಾವಿರ ರೂ ಗಡಿಯತ್ತ ಮಟನ್ ದರ; ನಾನ್‌ವೆಜ್ ಪ್ರಿಯರಿಗೆ ಶಾಕ್!
ಚಳಿ ಮತ್ತು ಗಾಳಿಗೆ ಸಿಲಿಕಾನ್ ಸಿಟಿ ಜನ ಥರಗುಟ್ಟುತ್ತಿದ್ದಾರೆ. ಜನ ಮಾಂಸಹಾರಕ್ಕೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಹೆಚ್ಚಿದ್ರಿಂದ ಮಟನ್ ರೇಟ್ ಸಾವಿರ ಗಡಿ ಮುಟ್ಟುತ್ತಿದೆ. ಚಳಿಗೆ ಕುರಿ ಬೆಳವಣಿಗೆ ಕುಸಿತ, ಪೂರೈಕೆ ವ್ಯತ್ಯಾಸ, ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಕೆಜಿ ಮಟನ್ ರೇಟ್ 900 ರೂಪಾಯಿಗೇರಿದೆ.
- Vinay Kashappanavar
- Updated on: Dec 21, 2025
- 8:13 am
ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ILI ಮತ್ತು SARI ಪ್ರಕರಣಗಳ ಕಡ್ಡಾಯ ಪರೀಕ್ಷೆ, ಔಷಧ ಹಾಗೂ ಲಸಿಕೆಗಳ ಸಂಗ್ರಹ, ವೆಂಟಿಲೇಟರ್ ಸಿದ್ಧತೆ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಮಕ್ಕಳು, ಗರ್ಭಿಣಿಯರು ಸೇರಿ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.
- Vinay Kashappanavar
- Updated on: Dec 21, 2025
- 7:20 am
ಹೊಸ ವರ್ಷಾಚರಣೆಗೆ ಹೊಸ ರೂಲ್ಸ್: ಪಬ್, ಕ್ಲಬ್, ಹೋಟೆಲ್ಗಳಿಗೆ ಮಾರ್ಗಸೂಚಿ ಬಿಡುಗಡೆ
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧತೆ ಶುರುವಾಗಿದೆ. ಈಗಾಗಲೇ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರೀಗೇಡ್ ರೋಡ್ನಲ್ಲಿ 2026 ರ ಸ್ವಾಗತಕ್ಕೆ ಕೌಂಡ್ಡೌನ್ ಶುರುವಾಗಿದ್ದು ಪಬ್, ಬಾರ್ ಹಾಗೂ ಕ್ಲಬ್ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಸೂಚಿಸಿರುವ ನಿಯಮಗಳೇನು? ಇಲ್ಲಿದೆ ವಿವರ.
- Vinay Kashappanavar
- Updated on: Dec 17, 2025
- 6:35 am
ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ಮೊಟ್ಟೆ ರಹಸ್ಯ ಬಿಚ್ಚಿಟ್ಟ ತಜ್ಞ ವೈದ್ಯರು, ಎಲ್ಲಾ ಗೊಂದಲಗಳಿಗೆ ತೆರೆ!
ಮೊಟ್ಟೆ ಮೇಲೆ ಸದ್ಯ ಅನುಮಾನ ಮೂಡಿದೆ. ಮೊಟ್ಟೆಗಳಲ್ಲಿ AOZ (ನೈಟ್ರೋಫ್ಯುರಾನ್) ಎಂಬ ಕ್ಯಾನ್ಸರ್ ಕಾರಕ ಅಂಶ ಪತ್ತೆ ಎಂಬ ಸುದ್ದಿ ವೈರಲ್ ಆಗಿದೆ. ಹೀಗಾಗಿ ಹೆದರಿದ ಜನರು ಮೊಟ್ಟೆ ಸೇವಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದ್ರೆ, ಇದುವರೆಗೂ ಅಧಿಕೃತವಾಗಿ ಯಾವುದೇ ಅಂಶ ಬೆಳಕಿಗೆ ಬಂದಿಲ್ಲ. ಹೀಗಾಗಿ ಜನ ಗೊಂದಲದಲ್ಲಿದ್ದಾರೆ. ಮೊಟ್ಟೆ ಸೇವಿಸೋದ್ರಿಂದ ಆರೋಗ್ಯಕ್ಕೆ ಕಂಟಕನಾ? ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಪತ್ತೆಯಾಗಿದ್ಯಾ? ಮೊಟ್ಟೆ ತಿಂದರೇ ಮಾರಕ ಕ್ಯಾನ್ಸರ್ ಬರುತ್ತಾ? ಹೀಗೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದ್ದು, ಇದರ ನಡುವೆ ಇದೀಗ ಕ್ಯಾನ್ಸರ್ ತಜ್ಞರು, ಮೊಟ್ಟೆ ಕ್ಯಾನ್ಸರ್ ರಹಸ್ಯ ಬಿಚ್ಚಿಟ್ಟಿದ್ದಾರೆ.
- Vinay Kashappanavar
- Updated on: Dec 16, 2025
- 7:48 pm
ಮಾನವೀಯತೆ ಮರೆತ ಬೆಂಗಳೂರಿನ ಜನ: ರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ
ಬೆಂಗಳೂರಿನಲ್ಲಿ ಯುವಕನೊಬ್ಬ ನಡುರಸ್ತೆಯಲ್ಲೇ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಂತೆ ಆತನ ಪತ್ನಿ ಅಂಗಲಾಚಿದರೂ ಸುತ್ತಮುತ್ತಲ ಜನ ನೆರವಾಗಲಿಲ್ಲ. ಈ ಅಮಾನವೀಯ ಘಟನೆ ಸಮಾಜದಲ್ಲಿ ಆಕ್ರೋಶ ಮೂಡಿಸಿದ್ದು, ವ್ಯಕ್ತಿ ರಸ್ತೆಯ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆದರೆ ಕುಟುಂಬದವರು ವೆಂಕಟರಮಣನ್ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
- Vinay Kashappanavar
- Updated on: Dec 16, 2025
- 5:39 pm
ಕೇಕ್ನಲ್ಲಿ ಮೂಡಿದ ಡಿಸ್ನಿ ಕ್ಯಾಸಲ್, ಮಾಸ್ಟರ್ ಶೆಫ್! ಬೆಂಗಳೂರಿನ ಕೇಕ್ ಶೋ ಹೇಗಿದೆ ನೋಡಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ 51ನೇ ವಾರ್ಷಿಕ ಕೇಕ್ ಶೋ ಆರಂಭಗೊಂಡಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದು, ಜನವರಿ 4ರವರೆಗೆ ನಡೆಯಲಿದೆ. ಶೆಫ್‌ಗಳ ಕಲಾತ್ಮಕ ಕೈಚಳಕದಲ್ಲಿ ಮೂಡಿಬಂದಿರುವ 25ಕ್ಕೂ ಹೆಚ್ಚು ವೈವಿಧ್ಯಮಯ ಕೇಕ್ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಉಚಿತ ಪ್ರವೇಶವಿರುವ ಈ ಪ್ರದರ್ಶನದಲ್ಲಿ ಡಿಸ್ನಿ ಕ್ಯಾಸಲ್, ಧಾರ್ಮಿಕ ದೇವಾಲಯಗಳು ಸೇರಿದಂತೆ ವಿಶಿಷ್ಟ ಕೇಕ್‌ಗಳನ್ನು ಕಾಣಬಹುದು.
- Vinay Kashappanavar
- Updated on: Dec 12, 2025
- 8:41 am
ಸೈಲೆಂಟ್ ಕಿಲ್ಲರ್ ಆಗ್ತಿದೆ ಗ್ಯಾಸ್ ಗೀಸರ್: ಜನರೇ ಎಚ್ಚರ!
ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗ್ಯಾಸ್ ಗೀಸರ್ನಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದು, ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ಬಳಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ನಿತ್ಯ ಸ್ನಾನಕ್ಕೆ ಗ್ಯಾಸ್ ಗೀಸರ್ ಬಳಕೆ ಮಾಡುವವರು ಎಚ್ಚರವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
- Vinay Kashappanavar
- Updated on: Dec 10, 2025
- 6:33 pm
ಮೊಟ್ಟೆ ದರ ಏರಿಕೆಯಿಂದ ಸರ್ಕಾರಿ ಶಾಲಾ ಅಧ್ಯಾಪಕರು ಕಂಗಾಲು: ಮಕ್ಕಳಿಗೆ ಮೊಟ್ಟೆ ನೀಡಲು ಖರ್ಚಾಗುತ್ತಿದೆ ಶಿಕ್ಷಕರ ದುಡ್ಡು!
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸರಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆ ಈಗ ಶಿಕ್ಷಕರಿಗೆ ಹೊರೆಯಾಗಿದೆ. ಸರಕಾರಿ ಶಾಲೆಗಳಲ್ಲಿ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಪ್ರಸ್ತುತ ಮೊಟ್ಟೆ ದರ 8 ರೂ.ಗೆ ಏರಿಕೆಯಾಗಿದ್ದರೂ, ಸರ್ಕಾರ 6 ರೂ. ನಿಗದಿಪಡಿಸಿದ್ದರಿಂದ ಶಿಕ್ಷಕರು ಹೆಚ್ಚುವರಿ ವೆಚ್ಚ ಭರಿಸಬೇಕಾಗಿದೆ. ಇದು ಶಿಕ್ಷಕರ ಜೇಬು ಸುಡುವಂತೆ ಮಾಡಿದೆ.
- Vinay Kashappanavar
- Updated on: Dec 10, 2025
- 7:55 am
ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿಗೆ 6 ವರ್ಷ ಕಡ್ಡಾಯ: ಏನಿದು ರಗಳೆ?
ಕರ್ನಾಟಕ ಶಿಕ್ಷಣ ಇಲಾಖೆ 2025-26ನೇ ಸಾಲಿಗೆ ಸಿಮಿತಗೊಳಿಸಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇದ್ದ ವಯೋಮಿತಿಯನ್ನು ಸಡಲಿಕೆ ಮಾಡಿತ್ತು. ಅದೇ ವಯೋಮಿತಿ ಸಡಲಿಕೆ ವಿಚಾರ ಇದೀಗ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ. 2026-27ನೇ ಸಾಲಿಗೂ ವಯೋಮಿತಿ ಸಡಲಿಕೆ ನೀಡುವಂತೆ ಪೋಷಕರು ಶಿಕ್ಷಣೆ ಇಲಾಖೆಗೆ ಒತ್ತಾಯಿಸಿದ್ದಾರೆ.
- Vinay Kashappanavar
- Updated on: Dec 8, 2025
- 7:38 pm