ಪ್ರಯಾಣಿಕನ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಬೆಂಗಳೂರು: ಆಟೋದಲ್ಲಿ ಮರೆತು ಹೋಗಿದ್ದ ಪ್ರಯಾಣಿಕನ ಹಣವನ್ನು ಹಿಂದಿರುಗಿಸುವ ಮೂಲಕ ಚಾಲಕ ರಮೇಶ್ ಬಾಬು ನಾಯಕ್ ಪ್ರಮಾಣಿಕತೆಯನ್ನು ಮೆರೆದಿದ್ದಾರೆ. ಮಾಲ್ಡೀವ್ಸ್​ನಲ್ಲಿ‌ ನೆಲೆಸಿರುವ ಭಾರತೀಯ ಮೂಲದವರಾದ ಡಾ.ಎಂ.ಆರ್.ಭಾಸ್ಕರ್ ಆಟೋದಲ್ಲಿ ಹಣದ ಬ್ಯಾಗ್ ಮರೆತು ಹೋಗಿದ್ದರು.

ಸುಮಾರು 1.50 ಲಕ್ಷ ನಗದು ಹಾಗೂ 1200 ಯು.ಎಸ್ ಡಾಲರ್ ಹಣದ ಬ್ಯಾಗ್ ಅನ್ನು ಡಾ.ಎಂ.ಆರ್.ಭಾಸ್ಕರ್ ಆಟೋದಲ್ಲಿ ಬಿಟ್ಟು ಹೋಗಿದ್ದರು. ಇದನ್ನು ನೋಡಿದ ಚಾಲಕ ರಮೇಶ್ ಬಾಬು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಹಣದ ಬ್ಯಾಗ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕನ ಕಾರ್ಯ ಮೆಚ್ಚಿದ ಪೊಲೀಸರು ರಮೇಶ್​ ಬಾಬುಗೆ ಸನ್ಮಾನ ಮಾಡಿದ್ದಾರೆ.

Related Tags:

Related Posts :

Category: