Auto Tips: ಹೆಚ್ಚುತ್ತಿದೆ ಕದ್ದ ಕಾರುಗಳ ಮರಾಟ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಒಮ್ಮೆ ಹೀಗೆ ಮಾಡಿ
ಕಾರ್ ಕ್ಲೋನಿಂಗ್‌ನಲ್ಲಿ, ಅಪರಾಧಿಗಳು ಕದ್ದ ಕಾರಿನ ಚಾಸಿಸ್ ಸಂಖ್ಯೆ, ಇಂಜಿನ್ ಸಂಖ್ಯೆ ಮತ್ತು ಇತರ ಪ್ರಮುಖ ಗುರುತಿನ ಚಿಹ್ನೆಗಳನ್ನು ಬದಲಿಸಿ ಅದನ್ನು ಮಾನ್ಯವಾದ ಕಾರಿನಂತೆ ಕಾಣುವಾಗೆ ಮಾಡುತ್ತಾರೆ. ಅದರ ನಂತರ ಅವರು ಈ ಕಾರನ್ನು ಮಾರಾಟ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಕಾರ್ ಕ್ಲೋನಿಂಗ್‌ನಂತಹ ವಂಚನೆಯ ಘಟನೆಗಳೂ ಹೆಚ್ಚುತ್ತಿವೆ. ಮಾರುಕಟ್ಟೆಯಲ್ಲಿ ಅನೇಕ ಆನ್‌ಲೈನ್ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿವೆ, ಅಲ್ಲಿ ಹಳೆಯ ಕಾರುಗಳ ಖರೀದಿ ಮತ್ತು ಮಾರಾಟ ನಡೆಯುತ್ತದೆ. ಕದ್ದ ಕಾರುಗಳನ್ನು ಕ್ಲೋನ್ ಮಾಡಿ ಅಮಾಯಕರಿಗೆ ಮಾರಾಟ ಮಾಡಲು ಕಾರು ಕಳ್ಳತನದ ಗ್ಯಾಂಗ್‌ಗಳು ಆನ್‌ಲೈನ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಇದರಿಂದ ಜನರಿಗೆ ಮೋಸವಾಗುತ್ತಿದೆ.
ಇತ್ತೀಚೆಗೆ, ನೋಯ್ಡಾ ಪೊಲೀಸರು ಅಂತಹ ಗ್ಯಾಂಗ್ ಅನ್ನು ಹಿಡಿದಿದ್ದಾರೆ. ಇವರು ಕಾರುಗಳನ್ನು ಕ್ಲೋನ್ ಮಾಡಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಐಷಾರಾಮಿ ವಾಹನಗಳನ್ನು ಮಾರಾಟ ಮಾಡುತ್ತಿದ್ದರು. ಕಾರ್ ಕ್ಲೋನಿಂಗ್ ಕಾನೂನುಬಾಹಿರ ಕೃತ್ಯವಾಗಿದ್ದು, ಕಳ್ಳರು ಕದ್ದ ಕಾರನ್ನು ನೈಜವಾಗಿ ಕಾಣುವಂತೆ ಮಾಡಿ ಜನರಿಗೆ ಮಾರಾಟ ಮಾಡುತ್ತಾರೆ.
ಕಾರ್ ಕ್ಲೋನಿಂಗ್ ಎಂದರೇನು?
ಕಾರ್ ಕ್ಲೋನಿಂಗ್‌ನಲ್ಲಿ, ಅಪರಾಧಿಗಳು ಕದ್ದ ಕಾರಿನ ಚಾಸಿಸ್ ಸಂಖ್ಯೆ, ಇಂಜಿನ್ ಸಂಖ್ಯೆ ಮತ್ತು ಇತರ ಪ್ರಮುಖ ಗುರುತಿನ ಚಿಹ್ನೆಗಳನ್ನು ಬದಲಿಸಿ ಅದನ್ನು ಮಾನ್ಯವಾದ ಕಾರಿನಂತೆ ಕಾಣುವಾಗೆ ಮಾಡುತ್ತಾರೆ. ಅದರ ನಂತರ ಅವರು ಈ ಕಾರನ್ನು ಮಾರಾಟ ಮಾಡುತ್ತಾರೆ. ಈ ರೀತಿಯಾಗಿ ಖರೀದಿದಾರನು ತಾನು ನಿಜವಾದ ಮತ್ತು ಮಾನ್ಯವಾದ ಕಾರನ್ನು ಖರೀದಿಸುತ್ತಿದ್ದೇನೆ ಎಂದು ಭಾವಿಸುತ್ತಾನೆ, ಆದರೆ ವಾಸ್ತವದಲ್ಲಿ ಅದು ಕದ್ದ ಕಾರಾಗಿರುತ್ತದೆ.
ಕಾರ್ ಕ್ಲೋನಿಂಗ್ ಅಪಾಯಗಳು
ನೀವು ಕ್ಲೋನ್ ಮಾಡಿದ ಕಾರನ್ನು ಖರೀದಿಸಿದರೆ, ಕಾನೂನು ತೊಂದರೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಪೊಲೀಸರು ಮತ್ತು ಕಾನೂನಿನ ದೃಷ್ಟಿಯಲ್ಲಿ ಇದು ಕದ್ದ ಕಾರು ಆಗಿರುತ್ತದೆ. ಈ ಕಾರನ್ನು ಯಾವಾಗ ಬೇಕಾದರೂ ಮುಟ್ಟುಗೋಲು ಹಾಕಿಕೊಳ್ಳಬಹುದು. ಕ್ಲೋನ್ ಮಾಡಿದ ಕಾರನ್ನು ಯಾವುದಾದರು ಅಪರಾಧದಲ್ಲೂ ಬಳಸಿರಬಹುದು.
ಇದನ್ನೂ ಓದಿ: ಕಾರು ಓಡಿಸುವಾಗ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆದರೆ ತಪ್ಪಿಯೂ ಹೀಗೆ ಮಾಡಬೇಡಿ
ವಂಚನೆ ತಪ್ಪಿಸುವುದು ಹೇಗೆ?
ಸೆಕ್ಟರ್ 63 ನೋಯ್ಡಾ ಪೊಲೀಸರು ಕಾರ್ ಕ್ಲೋನಿಂಗ್ ಮಾಡುವುದನ್ನು ತಪ್ಪಿಸಲು ಬಹಳ ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇದರಲ್ಲಿ, ಸರಿಯಾದ ಕಾರಿನ ಡೇಟಾವನ್ನು ನಿಖರವಾಗಿ ನಕಲಿಸಿ ಕ್ಲೋನ್ ಕಾರ್ಗೆ ಪರಿವರ್ತಿಸುತ್ತಾರೆ. ನೀವು ಕಾರು ಖರೀದಿಸಲು ಹೋದಾಗಲೆಲ್ಲಾ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಕಾಗದವನ್ನು ಸಿದ್ಧಪಡಿಸುವಾಗ ಅದರಲ್ಲಿ ನಿಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಯಾವುದೇ ಬ್ರೋಕರ್ ಅಥವಾ ಡೀಲರ್ ಫೋನ್ ಸಂಖ್ಯೆಯನ್ನು ನೀಡಬಾರದು ಎಂದು ಹೇಳಿದ್ದಾರೆ.
ಹಾಗೆಯೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಮೊದಲು, ಒಮ್ಮೆ ಏಜೆನ್ಸಿಗೆ ಹೋಗಿ ಕಾರನ್ನು ಸ್ಕ್ಯಾನ್ ಮಾಡಿ. ಇದರಿಂದ ಅದರ ನಿಜವಾದ ಚಾಸಿಸ್ ಸಂಖ್ಯೆ ಇಂಜಿನ್ ಕಂಟ್ರೋಲ್ ಮಾಡ್ಯೂಲ್ (ECM) ಘಟಕದಿಂದ ಬರುತ್ತದೆ. ನಂತರ ಹಳೆಯ ಆರ್‌ಸಿ ಮತ್ತು ನೀವು ಖರೀದಿಸುವ ವಾಹನದ ಚಾಸಿಸ್ ಸಂಖ್ಯೆಗೆ ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಿ ಎಂಬ ಮಾಹಿತಿ ನೀಡಿದ್ದಾರೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ