10 Yr Warranty: ಹೊಂಡಾ ಸ್ಕೂಟರ್ ಮತ್ತು ಬೈಕ್ಗಳ ಈ ಮಾಡೆಲ್ಗಳಿಗೆ 10 ವರ್ಷದವರೆಗೂ ವಾರಂಟಿ; ಹೆಚ್ಚಿನ ಮಾಹಿತಿ ಇಲ್ಲಿದೆ
Honda Scooters and Bike Warranty Extension: 250 ಸಿಸಿವರೆಗಿನ ತನ್ನ ದ್ವಿಚಕ್ರ ವಾಹನಗಳಿಗೆ 10 ವರ್ಷದವರೆಗೆ ವಾರಂಟ್ ವಿಸ್ತರಿಸುವ ಸ್ಕೀಮ್ ಅನ್ನು ಹೀರೋ ಮೋಟಾರ್ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಘೋಷಿಸಿದೆ...
ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಸಾಮಾನ್ಯವಾಗಿ 3ರಿಂದ 5 ವರ್ಷ ವಾರಂಟಿ (Warranty) ಇರುತ್ತದೆ. ಆದರೆ, ಹೊಂಡಾ ಸಂಸ್ಥೆಯ ಬೈಕ್ ಮತ್ತು ಸ್ಕೂಟರ್ಗಳಿಗೆ 10 ವರ್ಷದವರೆಗೆ ವಾರಂಟಿ ಇದೆ. 250 ಸಿಸಿವರೆಗಿನ ತನ್ನ ದ್ವಿಚಕ್ರ ವಾಹನಗಳಿಗೆ 10 ವರ್ಷದವರೆಗೆ ವಾರಂಟ್ ಆಫರ್ ಕೊಡುವ ಇಡಬ್ಲ್ಯೂ ಪ್ಲಸ್ (Extended Warraty Plus) ಸ್ಕೀಮ್ ಅನ್ನು ಹೀರೋ ಮೋಟಾರ್ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (HMSI) ತಿಳಿಸಿದೆ.
ಹೊಂಡಾದ ಎಕ್ಸ್ಟೆಂಡೆಡ್ ವಾರಂಟಿ ಪ್ಲಸ್ ಹಳೆಯ ಹೊಂಡಾ ದ್ವಿಚಕ್ರ ವಾಹನಗಳಿಗೆ ವಾರಂಟಿ ಕವರೇಜ್ ವಿಸ್ತರಿಸುವ ಸ್ಕೀಮ್ ಆಗಿದೆ. 150 ಸಿಸಿ ಯಿಂದ ಹಿಡಿದು 250 ಸಿಸಿವರೆಗಿನ ಅದರ ಟೂ ವೀಲರ್ಗಳಿಗೆ ಈ ವಾರಂಟಿ ವಿಸ್ತರಣೆಯ ಅವಕಾಶ ಇದೆ.
ಹೊಂಡಾ ಸ್ಕೂಟರ್ ಅಥವಾ ಬೈಕ್ ಖರೀದಿಸಿದ ಏಳರಿಂದ ಒಂಬತ್ತನೇ ವರ್ಷದಲ್ಲಿ ವಾರಂಟಿ ವಿಸ್ತರಣೆ ಮಾಡಬಹುದು. ನೀವು ವಾಹನ ಮಾರಿದಾಗಲೂ ಈ ವಾರಂಟಿಯನ್ನೂ ವರ್ಗಾವಣೆ ಮಾಡಬಹುದು. ರಿನಿವಲ್ ಕೂಡ ಸಾಧ್ಯವಿದೆ.
ಇದನ್ನೂ ಓದಿ: Honda Dio H-Smart: ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ
ಹೊಂಡಾ ಎಕ್ಸ್ಟೆಂಡೆಡ್ ವಾರಂಟಿ ಪ್ಲಸ್ ಪ್ರೋಗ್ರಾಮ್ ಅಡಿಯಲ್ಲಿ ನೀವು ವಾಹನ ಖರೀದಿಸಿದ 7ನೇ ವರ್ಷದಲ್ಲಿ 3 ವರ್ಷ ವಾರಂಟಿ ವಿಸ್ತರಿಸುವ ಆಯ್ಕೆ ಆರಿಸಿಕೊಳ್ಳಬಹುದು. 8ನೇ ವರ್ಷದಲ್ಲಿ 2 ವರ್ಷದ ಪಾಲಿಸಿ ಪಡೆಯಬಹುದು. 9ನೇ ವರ್ಷದಲ್ಲಿ ಒಂದು ವರ್ಷದ ಪಾಲಿಸಿ ಪಡೆಯಬಹುದು. ಈ ಸ್ಕೀಮ್ನಲ್ಲಿ ಹೊಂಡಾ ಸ್ಕೂಟರ್ಗಳಾದರೆ 1,20,000 ಕಿಮೀವರೆಗೂ ವಾರಂಟಿ ಕವರೇಜ್ ಇರುತ್ತದೆ. ಬೈಕ್ಗಳಾದರೆ 1,30,000 ಕಿಮೀವರೆಗೂ ಆಗುತ್ತದೆ.
ಹೊಂಡಾ ಎಕ್ಸ್ಟೆಂಡೆಡ್ ವಾರಂಟಿ ಪ್ಲಸ್ ಬೆಲೆ ಎಷ್ಟು?
ಹೊಸ ಹೊಂಡಾ ವಿಸ್ತರಿತ ವಾರಂಟಿ ಪ್ಲಸ್ ಸ್ಕೀಮ್ 150 ಸಿಸಿ ಬೈಕ್ ಮಾಡಲ್ಗಳಿಗಾದರೆ 1,317 ರೂ ಬೆಲೆ ಇದೆ. 150ಸಿಸಿ ಮೇಲ್ಟಟ್ಟು 250 ಸಿಸಿವರೆಗಿನ ಮಾಡೆಲ್ಗಳಾದರೆ ವಿಸ್ತೃತ ವಾರಂಟಿಯ ಬೆಲೆ ಅಂದಾಜು 1,667 ರೂ ಇದೆ.
ಇನ್ನಷ್ಟು ಆಟೊಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ