ಭರ್ಜರಿ ಮೈಲೇಜ್ ನೊಂದಿಗೆ ಬುಕಿಂಗ್ ನಲ್ಲಿ ಹೊಸ ಅಲೆ ಎಬ್ಬಿಸಿದ 2024ರ ಮಾರುತಿ ಸುಜುಕಿ ಸ್ವಿಫ್ಟ್

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಬಿಡುಗಡೆ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬುಕಿಂಗ್ ಪಡೆದುಕೊಂಡಿದೆ.

ಭರ್ಜರಿ ಮೈಲೇಜ್ ನೊಂದಿಗೆ ಬುಕಿಂಗ್ ನಲ್ಲಿ ಹೊಸ ಅಲೆ ಎಬ್ಬಿಸಿದ 2024ರ ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್
Follow us
|

Updated on: Jun 05, 2024 | 8:31 PM

ವಿನೂತನ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕಾರಿಗೆ ಭಾರೀ ಪ್ರಮಾಣದ ಬೇಡಿಕೆ ದಾಖಲಾಗುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬರೋಬ್ಬರಿ 45 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ದಾಖಲಿಸಿದ್ದಾರೆ. ಹೊಸ ಕಾರು ಈ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಯೊಂದಿಗೆ ಬಿಡುಗಡೆಯಾಗಿದ್ದು, ಹೊಸ ಕಾರಿನ ಮಧ್ಯಮ ಕ್ರಮಾಂಕದಲ್ಲಿರುವ ವಿಎಕ್ಸ್ಐ ವೆರಿಯೆಂಟ್ ಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದೆ.

ಹೊಸ ಸ್ವಿಫ್ಟ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ(ಆಪ್ಷನ್), ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6.49 ಲಕ್ಷದಿಂದ ರೂ. 9.50 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಸ್ವಿಫ್ಟ್ ಹೊಸ ಕಾರಿನಲ್ಲಿ ಈ ಬಾರಿ ಮತ್ತೊಂದು ವಿಶೇಷವೆಂದರೆ, ಮೂರು ಸಿಲಿಂಡರ್ ವೈಶಿಷ್ಟತೆಯ 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಈ ಮೂಲಕ ಇದು 82 ಹಾರ್ಸ್ ಪವರ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಗೆ 24.8 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಮಾದರಿಯು 25.75 ಕಿ.ಮೀ ಮೈಲೇಜ್ ನೀಡುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಸ್ವಿಫ್ಟ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಇದರಲ್ಲಿ ಸಿಎನ್ ಜಿ ಮಾದರಿಯನ್ನು ಸಹ ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಿಎನ್ ಜಿ ಮಾದರಿಯು ಸ್ವಿಫ್ಟ್ ಕಾರಿನ ವಿಎಕ್ಸ್ಐ ಮ್ಯಾನುವಲ್ ಆವೃತ್ತಿ ಆಧರಿಸಿ ಬಿಡುಗಡೆಯಾಗಬಹುದಾಗಿದ್ದು, ಇದು ಪೆಟ್ರೋಲ್ ಮಾದರಿಗಿಂತಲೂ ರೂ. 70 ಸಾವಿರದಿಂದ ರೂ. 90 ಸಾವಿರದಷ್ಟು ಹೆಚ್ಚುವರಿ ಬೆಲೆಯೊಂದಿಗೆ ಅತ್ಯಧಿಕ ಮೈಲೇಜ್ ನೀಡುವ ಸಿಎನ್ ಜಿ ಕಾರು ಮಾದರಿಯಾಗಿರಲಿದೆ.

ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 600 ಕಿ.ಮೀ ಮೈಲೇಜ್ ನೀಡುವ ಕಿಯಾ ಇವಿ3 ಎಸ್ ಯುವಿ ಅನಾವರಣ

ಜೊತೆಗೆ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ಬದಲಾವಣೆಗೊಳಿಸಲಾದ ಆಕರ್ಷಕ ವಿನ್ಯಾಸ ಹೊಂದಿದ್ದು, ಒಳಭಾಗದಲ್ಲೂ ಕೂಡಾ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಸೇರಿದಂತೆ ಎಲ್ಇಡಿ ಹೆಡ್ ಲೈಟ್ಸ್, 9 ಇಂಚಿನ ಫ್ಲೋಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಪ್ರೀಮಿಯಂ ಆಗಿರುವ ಫ್ರಾಬ್ರಿಕ್ ಆಸನಗಳು, ವೈರ್ ಲೆಸ್ ಚಾರ್ಜಿಂಗ್, ಆಟೋ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ವಿವಿಧ ಸೌಲಭ್ಯಗಳು ಗಮನಸೆಳೆಯುತ್ತಿವೆ. ಹಾಗೆಯೇ ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳು, ಐಸೋಫಿಕ್ಸ್ ಆ್ಯಂಕರ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.

ತಾಜಾ ಸುದ್ದಿ
4ನೇ ದಿನಕ್ಕೆ ಕಾಲಿಟ್ಟ ಅಧಿವೇಶನ, ಬಾವಿಗಿಳಿದು ಬಿಜೆಪಿ-ಜೆಡಿಎಸ್ ಧರಣಿ
4ನೇ ದಿನಕ್ಕೆ ಕಾಲಿಟ್ಟ ಅಧಿವೇಶನ, ಬಾವಿಗಿಳಿದು ಬಿಜೆಪಿ-ಜೆಡಿಎಸ್ ಧರಣಿ
ಇನ್ನೂ ಅರ್ಧದಷ್ಟು ಕೂಡ ಆಗಿಲ್ಲ ಶಿರೂರು ಗುಡ್ಡ ಕುಸಿತದ ತೆರವು ಕಾರ್ಯಾಚರಣೆ
ಇನ್ನೂ ಅರ್ಧದಷ್ಟು ಕೂಡ ಆಗಿಲ್ಲ ಶಿರೂರು ಗುಡ್ಡ ಕುಸಿತದ ತೆರವು ಕಾರ್ಯಾಚರಣೆ
ನಾರ್ತ್ ಇಂಡಿಯಾ ಮಂದಿ ಧ್ರುವ ಸರ್ಜಾಗೆ ಇಟ್ಟ ಹೊಸ ಹೆಸರೇನು?
ನಾರ್ತ್ ಇಂಡಿಯಾ ಮಂದಿ ಧ್ರುವ ಸರ್ಜಾಗೆ ಇಟ್ಟ ಹೊಸ ಹೆಸರೇನು?
Daily Devotional: ಕಾಗೆ ತಲೆಗೆ ಕುಕ್ಕಿದರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕಾಗೆ ತಲೆಗೆ ಕುಕ್ಕಿದರೆ ಏನು ಅರ್ಥ? ಈ ವಿಡಿಯೋ ನೋಡಿ
Daily Horoscope: ಆಷಾಢ ಶುಕ್ರವಾರದ ದಿನಭವಿಷ್ಯ, ಗ್ರಹಗಳ ಚಲನವಲನ ತಿಳಿಯಿರಿ
Daily Horoscope: ಆಷಾಢ ಶುಕ್ರವಾರದ ದಿನಭವಿಷ್ಯ, ಗ್ರಹಗಳ ಚಲನವಲನ ತಿಳಿಯಿರಿ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ