Registered Vehicle Scrapping Policy: ಸರ್ಕಾರದ ಅಸಡ್ಡೆ – ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?

ಹಳೆಯ ವಾಹನಗಳ ಸ್ಕ್ರಾಪಿಂಗ್ ಕಡ್ಡಾಯಗೊಳಿಸಿಲ್ಲ. ಹಾಗಾಗಿ ಜನ ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳೂ ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಹೆಚ್ಚು ಚಿಂತಿತರಾಗಿಲ್ಲ. ಜನರನ್ನು ಪ್ರೇರೇಪಿಸಲು ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವ ಸಾಹಸಕ್ಕೂ ಕೈಹಾಕುತ್ತಿಲ್ಲ. ಹೆಚ್ಚು ಕೇಳಿದರೆ ಕರ್ನಾಟಕದಲ್ಲಿ ವಾಹನಗಳ ಸ್ಕ್ರಾಪಿಂಗ್ ಜಾರಿಗೊಳಿಸುವ ಜವಾಬ್ದಾರಿಯನ್ನು ಹೊತ್ತಿರುವುದು ಎರಡು ಖಾಸಗಿ ಕಂಪನಿಗಳು ಅವುಗಳೇ ಜಾಗೃತಿ/ ಪ್ರಚಾರದಲ್ಲಿ ತೊಡಗಬೇಕು ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಇಲಾಖೆಯ ಉನ್ನತಾಧಿಕಾರಿಗಳು.

Registered Vehicle Scrapping Policy: ಸರ್ಕಾರದ ಅಸಡ್ಡೆ - ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?
ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?
Follow us
|

Updated on:Jul 13, 2024 | 10:40 AM

ಬೆಂಗಳೂರು: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿಯನ್ನು ಕರ್ನಾಟಕ ಸರ್ಕಾರ ( Karnataka Registered Vehicle Scrapping Policy) ಇತ್ತೀಚೆಗೆ ಮಾರ್ಪಡಿಸಿದೆ. ಹಳೆಯ ವಾಹನವನ್ನು ಸ್ಕ್ರಾಪ್ ಮಾಡಿದ ನಂತರ ಅದರ ಮಾಲೀಕರು ನೂತನ ವಾಹನ ತೆಗೆದುಕೊಳ್ಳುವಾಗ ಮೋಟಾರು ವಾಹನ ತೆರಿಗೆಯಲ್ಲಿ ಪರಿಷ್ಕೃತ ದರಗಳ ರಿಯಾಯಿತಿ ಈ ಹಿಂದಿನಂತೆ ಮುಂದುವರಿಯಲಿದೆ . ಟ್ರಾಕ್ಟರ್ ಸೇರಿದಂತೆ ಎಲ್ಲಾ ನಿರ್ಮಾಣ ಸಲಕರಣೆಗಳ ವಾಹನಗಳ ಮೇಲೆ 10% ತೆರಿಗೆ ರಿಯಾಯಿತಿ ಸಿಗಲಿದೆ. ಹೊಸದಾಗಿ ನೋಂದಾಯಿಸಲಾದ ಸಾರಿಗೆ ವಾಹನಗಳಿಗೆ ಜೀವಿತಾವಧಿ ತೆರಿಗೆ (ಎಲ್‌ಟಿಟಿ) ಮೇಲೆ 10 % ತೆರಿಗೆ ರಿಯಾಯಿತಿ, ಪಾವತಿಸಬೇಕಾದ ಒಟ್ಟು ತೆರಿಗೆಯ ಮೇಲೆ 10 % ತೆರಿಗೆ ರಿಯಾಯಿತಿ ಸಿಗಲಿದೆ. ಹೊಸದಾಗಿ ನೋಂದಾಯಿಸಲಾದ ಸಾರಿಗೆ ವಾಹನಗಳಿಗೆ 8 ವರ್ಷಗಳವರೆಗೆ ವಾರ್ಷಿಕವಾಗಿ 50 ರೂಪಾಯಿ ತೆರಿಗೆ ರಿಯಾಯಿತಿಯನ್ನು (ತ್ರೈಮಾಸಿಕದಲ್ಲಿ) ನೀಡಲಾಗುತ್ತದೆ.

ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ ಕರ್ನಾಟಕ-2022 ರ ಪ್ರಕಾರ ಕರ್ನಾಟಕದ ಮೊದಲ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (Karnataka’s first Registered Vehicles Scrapping Facility -RVSF) ) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ವಿಜಯಪುರದಲ್ಲಿದೆ. ಇದು ಖಾಸಗಿ ಮರುಬಳಕೆ ಕೇಂದ್ರವಾಗಿದ್ದು, ಸಂಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹಳೆಯ ವಾಹನಗಳ ಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಹಳೆಯ ಮತ್ತು ಸಂಚಾರ ಯೋಗ್ಯವಲ್ಲದ ವಾಹನಗಳನ್ನು ಸ್ಕ್ರ್ಯಾಪ್ ಮಾಡಬಹುದು.

ಈ ಕೇಂದ್ರವು ಆರಂಭದಲ್ಲಿ ಸೀಮಿತ ಸ್ಕ್ರ್ಯಾಪಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೊಂದು ಸ್ಕ್ರ್ಯಾಪಿಂಗ್ ಕೇಂದ್ರವು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೊಳಲ ಹೋಬಳಿಯಲ್ಲಿವೆ. ಕರ್ನಾಟಕದ ಎಲ್ಲಾ ಸ್ಕ್ರ್ಯಾಪ್ ವಾಹನಗಳನ್ನು ಸಂಸ್ಕರಿಸುವ ಹೊರೆ ಈ ಎರಡು ಕೇಂದ್ರಗಳ ಮೇಲಿದೆ. 2024 ರ ಫೆಬ್ರವರಿ ಅಂತ್ಯದ ವೇಳೆಗೆ 1,373 ಅರ್ಜಿಗಳು ಬಂದಿದ್ದು ಅದರಲ್ಲಿ 1,157 ವಾನಹಗಳನ್ನು ಸ್ಕ್ರ್ಯಾಪಿಂಗ್​​ಗೆ ಅನುಮೋದಿಸಲಾಗಿದೆ.

ಹಳೆಯ ವಾಹನಗಳ ಸ್ಕ್ರಾಪಿಂಗ್ ಕಡ್ಡಾಯಗೊಳಿಸಿಲ್ಲ. ಹಾಗಾಗಿ ಜನ ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳೂ ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಹೆಚ್ಚು ಚಿಂತಿತರಾಗಿಲ್ಲ. ಜನರನ್ನು ಪ್ರೇರೇಪಿಸಲು ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವ ಸಾಹಸಕ್ಕೂ ಕೈಹಾಕುತ್ತಿಲ್ಲ. ಹೆಚ್ಚು ಕೇಳಿದರೆ ಕರ್ನಾಟಕದಲ್ಲಿ ವಾಹನಗಳ ಸ್ಕ್ರಾಪಿಂಗ್ ಜಾರಿಗೊಳಿಸುವ ಜವಾಬ್ದಾರಿಯನ್ನು ಹೊತ್ತಿರುವುದು ಎರಡು ಖಾಸಗಿ ಕಂಪನಿಗಳು ಅವುಗಳೇ ಜಾಗೃತಿ/ ಪ್ರಚಾರದಲ್ಲಿ ತೊಡಗಬೇಕು ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಇಲಾಖೆಯ ಉನ್ನತಾಧಿಕಾರಿಗಳು.

Also Read: Scrapping Policy – ಸರ್ಕಾರಕ್ಕಿಲ್ಲ ಮುತುವರ್ಜಿ; ಹಳೆಯ ವಾಹನಗಳ ಸ್ಕ್ರ್ಯಾಪಿಂಗ್ ಯೋಜನೆಗೆ ರಹದಾರಿ ಯಾವುದಯ್ಯಾ!?

ಮತ್ತೊಬ್ಬ ಅಧಿಕಾರಿ ಸ್ಕ್ರಾಪಿಂಗ್ ಜಾರಿಗೊಳಿಸುವ ಜವಾಬ್ದಾರಿ ಇಲಾಖೆ/ ಸರ್ಕಾರದ ಮೇಲೆಯೂ ಇದೆ. ಅದರ ಬಗ್ಗೆ ಮುಂದೆ ಆಲೋಚಿಸುತ್ತೇವೆ. ಜಾಹೀರಾತು/ ಪ್ರಚಾರದ ಬಗ್ಗೆ ಯೋಜನೆ ರೂಪಿಸಿ, ಜನರನ್ನು ಪ್ರೇರೇಪಿಸುವುದಾಗಿ ಹೇಳುತ್ತಾರೆ.

ನೀತಿಯನ್ನೂ ವಾಲಂಟರಿ ಆಗಿಲ್ಲದಿರುವುದರಿಂದ ಜನ ಮನ್ನಣೆ ಸಿಗುತ್ತಿಲ್ಲ ಎಂದು ಸಬೂಬು ಹೇಳುವ ಅಧಿಕಾರಿಗಳು ನೀತಿ ಜಾರಿಗೆ ಅಸಡ್ಡೆ ಹೊಂದಿದ್ದಾರೆ. ಯಾವುದೇ ಸರ್ಕಾರಿ ಯೋಜನೆ ಜಾರಿಗೆ ಬರಬೇಕು ಅಂದರೆ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗುತ್ತದೆ. ಆದರೆ ಈ ನೀತಿಯ ಬಗ್ಗೆ ಅಧಿಕಾರಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಜನರೇ ಮುಂದೆ ಬಂದಾಗ ನೋಡೋಣ ಅಂದರಾಯಿತು ಎಂದು ಸುಮ್ಮನಿದ್ದಾರೆ.

ಇನ್ನು ಸರ್ಕಾರವೂ ಮೇಲ್ಮಟ್ಟದಲ್ಲಿ ಈ ನೀತಿಯ ಬಗ್ಗೆ ಪ್ರಚಾರಕ್ಕೆ ಮುಂದಾಗಿಲ್ಲ. ದೆಹಲಿ ಪರಿಸ್ಥಿತಿ ಇಲ್ಲಿಗೂ ಬರಲಿ ಆಗ ನೋಡಿದರಾಯಿತು ಎಂಬ ಮನೋಭಾವ ಹೊಂದಿದೆ. ಅಲ್ಲಿ ದಿಲ್ಲಿಯಲ್ಲಿ ವಾಯುಮಾಲಿನ್ಯ ಅಕ್ಷರಶಃ ಗಗನ ತಲುಪಿದಾಗ, ಸುಪ್ರೀಂಕೋರ್ಟ್​ ಮಧ್ಯೆ ಪ್ರವೇಶಿದಾಗ ದಿಲ್ಲಿ ಸರ್ಕಾರ ಎಚ್ಚೆತ್ತುಕೊಂಡಿತು. ಬೆಂಗಲೂರಿನ ಈಗಿನ ಟ್ರಾಫಿಕ್ ಪರಿಸ್ಥಿತಿ ನೋಡಿದರೆ ಇಲ್ಲೂ ಅದೇ ಪರಿಸ್ಥಿತಿ ಎದುರಾದೀತು. ಅದಕ್ಕೆ ಹೆಚ್ಚು ದಿನ ಹಿಡಿಸುವುದಿಲ್ಲ ಎಂದು ಎಚ್ಚರಿಸುತ್ತಾರೆ ನಿವೃತ್ತ ಅಧಿಕಾರಿಯೊಬ್ಬರು.

ಈ ಮಧ್ಯೆ, ಜನರ ಬಳಿ ಹೋದರೆ ಅವು ಹಳೆಯ ವಾಹನಗಳಲ್ಲ. ಅದರೊಂದಿಗೆ ನಾವು ಭಾನವಾತ್ಮಕವಾಗಿ ಹಂಚಿಕೊಂಡಿರುತ್ತೇವೆ. ನೀವು ಕಂಡಿರಬಹುದು… ಅಪ್ಪ-ಅಮ್ಮನ ಕೊಡುಗೆ/ ಅಮ್ಮನ ಕಾಣಿಕೆ/ ಅಣ್ಣನ ಕಾಣಿಕೆ/ ತಾಯಿ ತಂದೆಯ ಆಶೀರ್ವಾದ/ ಪ್ರೇಮದ ಕಾಣಿಕೆ ಎಂದು ಆ ವಾಹನಗಳ ಮೇಲೆ ಬರೆಸಿಕೊಂಡಿರುತ್ತೇವೆ. ಅಂತಹ ವಾಹನವನ್ನು ಹೇಗೆತಾನೆ ಮಾರುವುದು ಅಥವಾ ನಮ್ಮ ಕಣ್ಣೇದುರೇ ನಾಶಪಡಿಸುವುದು ಹೇಗೆ? ಮನಸು ಸುತರಾಂ ಒಪ್ಪೋಲ್ಲಾ ಎನ್ನುತ್ತಾರೆ.

ಇನ್ನೂ ಕೆಲವು ಮಂದಿ ಭಾನವಾತ್ಮಕವಾಗಿ ಹೇಳುವುದು ತುಂಬಾ ಮಾರ್ಮಿಕವಾಗಿ ಇದೆ. ವಯಸ್ಸಾಯ್ತು ಅಂತಾ ಅಪ್ಪ-ಅಮ್ಮನನ್ನು ಮನೆಯಿಂದ ಆಚೆ ಹಾಕುವುದಕ್ಕೆ ಆಗುತ್ತದಾ? ಈಗಿನ ಕಾಲದಲ್ಲಿ ಬಿಡಿ… ಹಿರಿಯರನ್ನು ಸೀದಾ ವೃದ್ಧಾಶ್ರಮಗಳಿಗೆ ಸೇರಿಸುವ ಮನಸುಗಳೂ ಇವೆ. ಆದರೆ ಹಾಗಂತ ನಾವು ಹಳೆಯ ವಾಹನಗಳನ್ನು ಸ್ಕ್ರಾಪ್​ ಮಾಡಿ/ ನಾಶಪಡಿಸಲು ಬಿಲ್ಕುಲ್ ಒಪ್ಪೋಲ್ಲಾ ಅಂತಾರೆ ಸುಮಾರು ಮಂದಿ. ಬೇಕಾದರೆ ನಮ್ಮ ಕಣ್ಣೆದುರೇ ನಮ್ಮ ವಾಹನ ಇರಲಿ. ಅದರ ಜೊತೆ ನಮ್ಮದು ಸೆಂಟಿಮೆಂಟ್ಸ್​ ಇರುತ್ತದೆ. ಸರ್ಕಾರ ಕಡ್ಡಾಯ/ಒತ್ತಾಯ ಮಾಡಿದರೆ ಅದನ್ನು ಮನೆಯಿಂದ ಆಚೆಗೆ ತೆಗೆಯುವುದೇ ಇಲ್ಲ ಎಂದೂ ಹೇಳುತ್ತಾರೆ. ಇನ್ನು ಕೆಲವರು ಅದನ್ನು ಅಷ್ಟೋ ಇಷ್ಟೂ ರಿಪೇರಿ/ಸರ್ವೀಸ್ ಮಾಡಿಸಿ ಜೋಪಾನ ಮಾಡಿ, ಮನೆಯ ಸದಸ್ಯನಂತೆ ಜನತದಿಂದ ನೋಡಿಕೊಳ್ಳುತ್ತೇವೆ ಅನ್ನುತ್ತಾರೆ.

ಇಲ್ಲಿ ಮತ್ತೊಂದು ವರ್ಗದ ಬಗ್ಗೆ ಹೇಳಬೇಕಿದೆ. ಗ್ರಾಮಾಂತರ ಭಾಗಗಳಲ್ಲಿ ವಾಹನಗಳು ಹಳೆಯದಾದರೆ ವಾಹನದಾರರು ಅದನ್ನು ಖಂಡಿತಾ scraping ಕೇಂದ್ರಕ್ಕೆ ಕಳಿಸಲು ಮುಂದಾಗುವುದಿಲ್ಲ. ಅಷ್ಟೋ ಇಷ್ಟೋ ರಿಪೇರಿ ಮಾಡಿಸಿಟ್ಟುಕೊಂಡು, ಇರುವುದರಲ್ಲೆ ತಳ್ಳೋಣಾ ಎಂಬ ಮನಸ್ಥಿತಿ ಹೊಂದಿರುತ್ತಾರೆ. ಸಿಟಿಗಳಲ್ಲಾದರೆ ಪೊಲೀಸರು ಹಿಡಿಯುತ್ತಾರೆ ಎಂಬ ಭಯವಾದರೂ ಇರುತ್ತದೆ. ಆದರೆ ಗ್ರಾಮಾಂತರ ಭಾಗದಲ್ಲಿ ಇಂತಹ ಯಾವುದೇ ಕಟ್ಟುಪಾಡುಗಳು ಇಲ್ಲದೆ ಹಳೆಯ ವಾಹನಗಳು ಹಳ್ಳಿ ರಸ್ತೆಗಳಲ್ಲಿ ಸಂಚರಿಸುವುದನ್ನು ಕಾಣಬಹುದು. ಇನ್ನು ಟ್ರ್ಯಾಕ್ಟರ್​​-ಟಿಲ್ಲರ್​​ ಸೇರಿದಂತೆ ಕೃಷಿ ವಾಹನಗಳು ಅವಧಿ ಮೀರಿ ಹಳೆಯದ್ದಾಗಿದ್ದರೂ ರೈತರ ಪ್ರಕಾರ ಬಳಕೆಗೆ ಯೋಗ್ಯವಾಗಿರುತ್ತವೆ!

Also Read: Monsoon Love Predictions – ಮುಂಗಾರು ಮಳೆಯಲ್ಲಿ ಪ್ರೀತಿಯ ಅಲೆಗಳು.. ಯಾವ ರಾಶಿಯವರೆಲ್ಲಾ ಪ್ರೀತಿ-ಪ್ರೇಮದಲ್ಲಿ ನೆನೆಯುತ್ತಾರೆ ನೋಡಿ!

ಇನ್ನು ಜೆಸಿಬಿ ವಾಹನಗಳು, ಬೋರ್​​ವೆಲ್​​ಗಳು ಮುಂತಾದ ಭಾರೀ ವಾಹನಗಳು ಇಂತಹ ಯಾವುದೇ ಗೋಜಿಗೆ ಹೋಗುವುದಿಲ್ಲ.ಲಕ್ಷಾಂತರ ರೂಪಾಯಿ ಸುರಿದು ಖರೀದಿಸಿರುವುದರಿಂದ ಅವುಗಳನ್ನು ಆದಷ್ಟು ಹೆಚ್ಚು ಕಾಲ ಬಳಸಲು ಬಯಸುತ್ತಾರೆ. ಹಾಕಿರುವ ಬಂಡವಾಳದ ಮೇಲೆ ಹಣ ತಕ್ಷಣಕ್ಕೆ ಬರುವುದಿಲ್ಲ ಎಂದು ವಾಹನ ಹಳೆಯದ್ದಾದರೂ ಬಳಸೋಣ ಎಂದು ಮಾಲೀಕರು ನಿರ್ಧರಿಸಿಬಿಡುತ್ತಾರೆ. ಇದು ನಿಜಕ್ಕೂ ವಿಶೇಷ ಪರಿಸ್ಥಿತಿಯಾಗಿದೆ. ಆದರೂ ಸಹ ಹಳೆಯ ವಾಹನಗಳ scraping ನೀತಿಗೆ ಇದು ಮಾರಕವಾಗುತ್ತದೆ.

ಒಟ್ಟಾರೆಯಾಗಿ ನೀತಿಯ ಬಗ್ಗೆ ಸರ್ಕಾರ/ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಆಮೇಲಷ್ಟೇ ಭಾವನಾತ್ಮಕ ವಿಷಯಗಳನ್ನು ಪಕ್ಕಕ್ಕಿಟ್ಟು ಜನ ಒಬ್ಬೊಬ್ಬರಾಗಿ ತಮ್ಮ ಹಳೆಯ ವಾಹನಗಳನ್ನು ಸಾಲಾಗಿ ತಂದು ನಿಲ್ಲಿಸಿ ತಮ್ಮ ವಾನಹವನ್ನು Scrap ಮಾಡಿ ಎಂದು ಹೇಳಬಹುದು. ಇಲ್ಲವಾದಲ್ಲಿ ಸದ್ಯಕ್ಕಂತೂ ನೀತಿಯೇ scrap ಅಗುವ ಅಪಾಯ/ ಲಕ್ಷಣಗಳಿವೆ.

ಹೋಗಲಿ ಖಾಸಗಿಯವರಿಂದ scraping unit ಸ್ಥಾಪನೆಯಾಗಿ, ಅದೊಂದು ದೊಡ್ಡ ಉದ್ಯಮವಾಗುತ್ತದಾ ಅಂದರೆ… ಅದಕ್ಕೆ ಸಾಕಷ್ಟು ಅವಕಾಶಗಳಿವೆ. ಏಕೆಂದರೆ ಹಳೆಯ ವಾಹನಗಳು ಲಕ್ಷಾಂತರ ಇವೆ. ಜೊತೆಗೆ ಅವು ಈಗಿನಂತೆ ಸುಧಾರಿತ ತಂತ್ರಜ್ಞಾನದಿಂದ ಉತ್ಪಾದನೆಯಾದ ವಾಹನಗಳಲ್ಲ. ಹಾಗಾಗಿ ಅವು ಹೆಚ್ಚು ಮಾಲಿನ್ಯಕಾರಕ ಮತ್ತು ಅಪಾಯಕಾರಿಯೂ ಹೌದು.

ಆದರೆ ಇಲ್ಲಿ ಸ್ಕ್ರಾಪಿಂಗ್​ ಉದ್ಯಮಿಗಳಿಗೆ ಉತ್ತೇಜನಕಾರಿ ವಾತಾವರಣ ಇಲ್ಲವಾಗಿದೆ: ಮುಖ್ಯವಾಗಿ ಇಂತಹ ಕೇಂದ್ರದ ಸ್ಥಾಪನೆಗೆ ವಿಶಾಲ ಜಾಗ ಬೇಕು. ಸರ್ಕಾರದಿಂದ ಒಂದಷ್ಟು ಸವಲತ್ತುಗಳು ಬೇಕು. ಆದರೆ ಹೆಚ್ಚು ವಾಹನಗಳು ಇರುವ ಬೆಂಗಳೂರು ಮತ್ತು ಸುತ್ತಮುತ್ತ ಜಾಗದ್ದೇ ಸಮಸ್ಯೆ. ಇದಕ್ಕೆ ಸರ್ಕಾರವೇ ಸೂಕ್ತ ಪರಿಹಾರ ಒದಗಿಸಬೇಕು.

Also Read: Political Crime Thriller – ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಸದ್ಯಕ್ಕೆ ಸರ್ಕಾರ ಶಾಸ್ತ್ರಕ್ಕೆಂದು ಒಂದೆರಡು scraping unit ಸ್ಥಾಪನೆಗೆ ಅನುಮೋದನೆ ನೀಡಿ ಸುಮ್ಮನಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳೇ ಹೇಳುವಂತೆ ರಾಜಧಾನಿಯ ನಾಲ್ಕೂ ದಿಕ್ಕಿಗೆ ನಾಲ್ಕಾರು ಕೇಂದ್ರಗಳನ್ನು ಸ್ಥಾಪಿಸಿದರೆ ಸಮಸ್ಯೆ ಬಗೆಹರಿದೀತು. ಆದರೆ…

ಹಾಗೆ ನೋಡಿದರೆ scraping ಉದ್ಯಮ ತುಂಬಾ ಲಾಭದಾಯಕವಾಗಿದೆ. ಅದು ಚಿನ್ನದ ಗಣಿಯಿದ್ದಂತೆ – ವಾಹನಗಳ ಹಳೆಯ ಸಾಮಾನುಗಲು, ಎಂಜಿನ್ನು, ಇತರೆ ಪರಿಕರ-ಸಾಧನಗಳು ಬೆಲೆಬಾಳುವಂತಹುದ್ದೇ ಆಗಿದೆ. ಆದರೆ ಅದಕ್ಕೆ ಸೂಕ್ತ ಉತ್ತೇಜನ ಸಿಗಬೇಕಿದೆ.

ಈ ಮಧ್ಯೆ ಜನ ಎಲೆಕ್ಟ್ರಾನಿಕ್ ವೆಹಿಕಲ್ಸ್​ ಬಗ್ಗೆ ಒಲವು ತೋರಿಸ್ತಾ ಇದಾರೆ. ಅದನ್ನು ಬಂಡವಾಳ ಮಾಡಿಕೊಂಡು ಸರ್ಕಾರ ಹಳೆಯ ವಾಹನಗಳ scraping ನೀತಿಯನ್ನು ಪ್ರಮೋಟ್​ ಮಾಡಬಹುದಲ್ಲವಾ? ಎಂಬ ಪ್ರಶ್ನೆಯೂ ಮೂಡುತ್ತದೆ.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 10:35 am, Sat, 13 July 24

Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್