ಅಯೋಧ್ಯೆಯಲ್ಲಿ ಭೂಮಿ ಪೂಜೆ, ಅಮೆರಿಕದಲ್ಲಿ ಮಂತ್ರ ಘೋಷಣೆ

ಆಗಸ್ಟ್ 5, 2020 ಅಸಂಖ್ಯಾತ ಶ್ರೀರಾಮಚಂದ್ರನ ಭಕ್ತರ ಪಾಲಿಗೆ ಅವಿಸ್ಮರಣೀಯ ದಿನ. ಯಾಕಂದ್ರೆ ಅಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಹುದಿನಗಳ ರಾಮಭಕ್ತರ ಕನಸು ನನಸಾಗಿಸುವ ನಿಟ್ಟಿನಲ್ಲಿ ಮೊದಲ ಮಹತ್ವಪೂರ್ಣ ಕೆಲಸವನ್ನು ನೆರವೇರಿಸಲಿದ್ದಾರೆ.

ಹೌದು ಆಗಸ್ಟ್ 5ರಂದು ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿಲಿದ್ದಾರೆ.ಈ ಸಂದರ್ಭದಲ್ಲಿ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಕೋಟಿ ಕೋಟಿ ರಾಮಭಕ್ತರು ಅಂದು ರಾಮನಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಸಂಭ್ರಮಿಸಲಿದ್ದಾರೆ.

ಅಮೆರಿಕ, ಯುರೋಪ್‌, ಲ್ಯಾಟಿನ್ ಅಮೆರಿಕ, ಕೆರಿಬಿಯನ್‌ ದ್ವಿಪಗಳು ಮತ್ತು ಕೆನಡಾ ಸೇರಿದಂತೆ ಅಲ್ಲಿನ ಹಿಂದೂ ದೇವಾಲಯಗಳ ಸಂಘಟನೆಗಳು ಅಂದು ರಾಮನಿಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಭಾರತದಲ್ಲಿ ನಡೆಯುವ ಕಾರ್ಯಕ್ರಮದ ಲೈವ್‌ ಪ್ರಸಾರದ ಸಂದರ್ಭದಲ್ಲಿ ಅಲ್ಲಿನ ದೇವಸ್ಥಾನಗಳ ಮುಖ್ಯಸ್ಥರು ಮತ್ತು ಪೂಜಾರಿಗಳ ಸಂಘಟನೆಗಳು ಲೈವ್‌ ನಡೆಯುವಾಗ ಆನ್‌ಲೈನ್‌ನಲ್ಲಿಯೇ ವಿಶೇಷ ಪ್ರಸಾರ, ಪೂಜೆ ಮತ್ತು ಮಂತ್ರಗಳ ಪಠನ ಮಾಡಲಿದ್ದಾರೆ.

ಹೀಗೆ ಮಾಡುವ ಮೂಲಕ ರಾಮ ಮಂದಿರ ನಿರ್ಮಾಣದಿಂದ ವಿಶ್ವಾದ್ಯಂತ ಇರುವ ರಾಮ ಭಕ್ತರಿಗೆ ಆಗುತ್ತಿರುವ ಆನಂದವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕದಲ್ಲಿರುವ ವಿಶ್ವ ಹಿಂದೂ ಪರಿಷತ್‌ ಸಂಘಟನೆ ಅಮೆರಿಕದ ಪ್ರಮುಖ ಸ್ಥಳಗಳಲ್ಲಿ ಅಯೋಧ್ಯೆಯಲ್ಲಿನ ಭೂಮಿ ಪೂಜೆಯ ನೇರ ಪ್ರಸಾರಕ್ಕೆ ಮತ್ತು ವಿಶೇಷ ಪೂಜೆಗೆ ವ್ಯವಸ್ಥೆ ಮಾಡುತ್ತಿದೆ.

Related Tags:

Related Posts :

Category:

error: Content is protected !!