ರಾಮ ಮಂದಿರ ಭೂಮಿ ಪೂಜೆಗೆ ಮೊದಲ ಆಮಂತ್ರಣ ಪತ್ರ ಸಿಕ್ಕಿದ್ದು ಇಕ್ಬಾಲ್​ಗೆ

ಲಕ್ನೋ: ಆಗಸ್ಟ್​ 5ರಂದು ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ, ಕಾರ್ಯಕ್ರಮಕ್ಕೆ ಬರುವವರಿಗೆ ಆಮಂತ್ರಣ ಪತ್ರವನ್ನು ಸಹ ಕಳುಹಿಸಲಾಗಿದೆ. ಆದರೆ, ಇವರಲ್ಲಿ ಭೂಮಿ ಪೂಜೆಗೆ ಆಗಮಿಸಲು ಪ್ರಪ್ರಥಮ ಆಮಂತ್ರಣ ಪತ್ರ ಸಿಕ್ಕಿರುವುದು ಯಾರಿಗೆ ಗೊತ್ತಾ? ಇಕ್ಬಾಲ್​ ಅನ್ಸಾರಿ.

ಹೌದು, ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದದಲ್ಲಿ ಮುಖ್ಯ ಕಕ್ಷಿದಾರರಾದ ಇಕ್ಬಾಲ್​ ಅನ್ಸಾರಿಗೆ ಮೊದಲ ಕಾರ್ಯಕ್ರಮದ ಮೊದಲ ಆಮಂತ್ರಣ ಪತ್ರವನ್ನ ನೀಡಲಾಗಿದೆ. ಇದನ್ನು ಖುದ್ದು ಅನ್ಸಾರಿಯವರೇ ಹಂಚಿಕೊಂಡಿದ್ದಾರೆ. ಆಮಂತ್ರಣ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಅನ್ಸಾರಿ ಮೊದಲ ಆಮಂತ್ರಣ ಪತ್ರವು ನನಗೆ ಸಿಕ್ಕಿರುವುದು ಬಹುಶಃ ಆ ಭಗವಂತ ರಾಮನ ಇಚ್ಛೆ ಅಂತಾ ಅನಿಸುತ್ತದೆ. ಇದನ್ನು ನಾನು ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Related Tags:

Related Posts :

Category: