ಮಸೀದಿ ಧ್ವಂಸ ಕೇಸ್: ಮಹತ್ವದ ತೀರ್ಪು ಪ್ರಕಟ, ಆರೋಪಿಗಳು ಆರೋಪ ಮುಕ್ತ, ಮುಕ್ತ, ಮುಕ್ತಾ!

ಲಖನೌ (ಉತ್ತರಪ್ರದೇಶ): ಅಯೋಧ್ಯೆಯಲ್ಲಿ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌನ ಸಿಬಿಐ ವಿಶೇಷ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶ ಎಸ್.ಕೆ. ಯಾದವ್‌ ತೀರ್ಪು ನೀಡಿದ್ದು, ಎಲ್ಲ 32 ಆರೋಪಿಗಳೂ ತಪ್ಪಿತಸ್ಥರು ಅಲ್ಲ ಎಂದು ಘೋಷಿಸಿದ್ದಾರೆ. ಕಳೆದ ತಿಂಗಳು ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್, ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಬಿಜೆಪಿಯ ಹಿರಿಯ ನಾಯಕರಿಗೆ Clean Chit
ಈ ಘಟನೆ ಆಕಸ್ಮಿಕವಾಗಿ ನಡೆದಿರುವಂಥದ್ದು. ಬಾಬ್ರಿ ಮಸೀದಿಯ ಧ್ವಂಸ ಪೂರ್ವನಿಯೋಜಿತ ಕೃತ್ಯವಲ್ಲ. ಆರೋಪಿಗಳ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

28 ವರ್ಷಗಳ ಬಳಿಕ ಅಂತಿಮ ತೀರ್ಪು ಪ್ರಕಟಿಸಿದ ಕೋರ್ಟ್ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಡಾ.ಮುರಳಿ ಮನೋಹರ ಜೋಶಿ, ಉಮಾಭಾರತಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಸೇರಿ 32 ಆರೋಪಿಗಳನ್ನು ಖುಲಾಸೆಗೊಳಿಸಿ, ದೋಷಿಗಳು ಅಲ್ಲ ಎಂದು ಕೋರ್ಟ್‌ ಸಾರಿದೆ.

1992 ಡಿಸೆಂಬರ್ 6ರಂದು ಸಾವಿರಾರು ಕರಸೇವಕರು ರಾಮನ ಜನ್ಮಭೂಮಿಯ ಮೇಲೆ ಬಾಬ್ರಿ ಮಸೀದಿಯಿದೆ ಎಂದು ಅದನ್ನು ಏಕಾಏಕಿ ಧ್ವಂಸಗೊಳಿಸಿದ್ದರು. ಅದಾದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 2,000 ಮಂದಿ ಹತ್ಯೆಗೀಡಾಗಿದ್ದರು.

ಧರ್ಮಗಳ ಆಧಾರದ ಮೇಲೆ ದ್ವೇಷ ಬಿತ್ತಿದ ಆರೋಪ, ಐಪಿಸಿ ಸೆಕ್ಷನ್ 153(A) ಅಡಿ ದ್ವೇಷ ಬಿತ್ತಿದ ಆರೋಪ, 153ಬಿ ಅಡಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತಂದ ಆರೋಪ, 120ಬಿ ಅಡಿ ಕ್ರಿಮಿನಲ್ ಒಳಸಂಚು ನಡೆಸಿದ ಆರೋಪ ಸೆಕ್ಷನ್‌ಗಳಡಿ ಆರೋಪಗಳನ್ನು ದಾಖಲಿಸಲಾಗಿತ್ತು.

ಸಿಬಿಐ ವಿಶೇಷ ಕೋರ್ಟ್ ಎರಡು FIR ಗಳ ಬಗ್ಗೆ ಇಂದು ಆದೇಶ ನೀಡಿದೆ. 197/1992 FIR ಮತ್ತು 198/1992 FIR . FIR 197 -ಇದು ಲಕ್ಷಾಂತರ ಕರಸೇವಕರು ಸೇರಿ ಬಾಬ್ರಿ ಕೆಡವಿರುವ ಬಗ್ಗೆ ಮತ್ತೊಂದು FIR 198- ಬಿಜೆಪಿ ನಾಯಕರು ಮಸೀದಿ ಕೆಡವಲು ಯೋಜನೆ ರೂಪಿಸಿದ್ದರ ಕುರಿತಾದ ಎಫ್ ಐ ಆರ್ ಆಗಿತ್ತು.
Also Read
ಅಯೋಧ್ಯೆ ಹೋರಾಟದ ಬಗ್ಗೆ ಹೆಮ್ಮೆ ಇದೆ; ನೇಣಿಗೇರಲು ಬಯಸುತ್ತೇನೆ: ಉಮಾಭಾರತಿ

ಇಂದು ಬಾಬ್ರಿ ಮಸೀದಿ ಧ್ವಂಸ ಕೇಸ್​ನ ಫೈನಲ್ ತೀರ್ಪು!

Related Tags:

Related Posts :

Category:

error: Content is protected !!