ಬಕ್ರೀದ್‌: ಕೊರೊನಾ ಸಂಕಷ್ಟದಲ್ಲಿ ಬಡವರಿಗೆ ಉಚಿತವಾಗಿ ಮಾಂಸ ಹಂಚಿದರು!

ಮೈಸೂರು: ಇಂದು ರಾಜ್ಯಾದ್ಯಂತ ಮುಸ್ಲಿಮ್‌ ಬಾಂಧವರು ಬಕ್ರೀದ್‌ ಹಬ್ಬವನ್ನ ಆಚರಿಸುತ್ತಿದ್ದಾರೆ. ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್‌ ಹಬ್ಬಕ್ಕೆ ಮೈಸೂರಿನ ವ್ಯಕ್ತಿಯೊಬ್ಬರು ಬಡ ಕುಟುಂಬಗಳ ನೆರವಿಗೆ ಧಾವಿಸಿದ್ದು, ಕುರಿ ಮಾಂಸವನ್ನ ಉಚಿತವಾಗಿ ಹಂಚುತ್ತಿದ್ದಾರೆ.

ಹೌದು ಮೈಸೂರಿನ ರೈಲ್ವೇ ಸ್ಕ್ರ್ಯಾಪ್‌ ಡೀಲರ್‌ ಸೈಯದ್‌ ಮುಜಾಹಿದ್‌ ಎನ್ನವವರು ಬಡ ಮುಸ್ಲಿಮ್‌ ಬಂಧುಗಳಿಗಾಗಿ ಸುಮಾರು 7 ಲಕ್ಷ ಮೌಲ್ಯದ 17 ಕುರಿಗಳನ್ನು ದಾನವಾಗಿ ನೀಡಿದ್ದಾರೆ. ಮೂರು ಕುಟುಂಬಗಳಿಗೆ ಒಂದು ಕುರಿ ಅಥವಾ ಪ್ರತಿ ಕುಟುಂಬಕ್ಕೆ ಸದಸ್ಯರನುಸಾರವಾಗಿ ಮಾಂಸ ವಿತರಣೆ ಮಾಡಿದ್ದಾರೆ.

ಇದಕ್ಕೆ ಕಾರಣ ಕೊರೊನಾ ಮಹಾಮಾರಿ. ಕೊರೊನಾದಿಂದಾಗಿ ಸಾಕಷ್ಟು ಬಡವರು ಸಮಸ್ಯೆಯಲ್ಲಿದ್ದು, ಮಾಂಸ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ನೆರವಾಗೋದು ಮುಜಾಹಿದ್‌ ಅವರ ಕಾಳಜಿ. ಹೀಗಾಗಿ ಲಷ್ಕರ್‌ ಮೊಹಲ್ಲಾದಲ್ಲಿ ಮುಜಾಹಿದ್‌ ಸಾಧ್ಯವಾದಷ್ಟೂ ಕುಟುಂಬಗಳಿಗೆ ಕುರಿ ಮಾಂಸ ವಿತರಿಸಿದ್ದಾರೆ.

Related Tags:

Related Posts :

Category:

error: Content is protected !!