ಗಣಿನಾಡಿನಲ್ಲಿ ಕೊರೊನಾ ಕಂಟ್ರೋಲ್‌ಗೆ ಹೊಸ ಪ್ರಯೋಗ

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ವೈರಸ್‌ ದಿನೇದಿನೆ ಸ್ಫೋಟಗೊಳ್ಳುತ್ತಲೇ ಇದೆ. ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದ್ದು, ಈವರೆಗೆ 34 ಜನ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸಿದ್ರೂ ಕಂಟ್ರೋಲ್‌ಗೇ ಬರ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ರಾಜ್ಯದಲ್ಲೇ ಮೊದಲ ಬಾರಿಗೆ ವೇಗವಾಗಿ ಕೊರೊನಾ ಸೋಂಕು ಪತ್ತೆ ಹಚ್ಚೋಕೆ ಱಪಿಡ್‌ ಆ್ಯಂಟಿಜೆನ್‌ ಕಿಟ್‌ಗಳನ್ನ ಬಳಸೋಕೆ ಮುಂದಾಗಿದೆ.

ಕೊರೊನಾ ವೈರಸ್ ಕಂಟ್ರೋಲ್‌ಗೆ ಹೊಸ ಪ್ರಯೋಗ..!
ಹೌದು, ಇದುವರೆಗೆ ದೆಹಲಿಯಲ್ಲಿ ಮಾತ್ರ ಱಪಿಡ್‌ ಆ್ಯಂಟಿಜೆನ್ ಕಿಟ್‌ಗಳನ್ನ ಬಳಕೆ ಮಾಡಲಾಗುತ್ತಿತ್ತು. ಇದರಿಂದ ಕೇವಲ 30 ನಿಮಿಷದೊಳಗೆ ಕೊವಿಡ್ ಪರೀಕ್ಷೆಯ ರಿಪೋರ್ಟ್ ಸಿಗುತ್ತದೆ. ಸಾಮಾನ್ಯವಾಗಿ ಲ್ಯಾಬ್‌ಗಳಲ್ಲಿ ಒಬ್ಬರಿಗೆ ಕೊವಿಟ್ ಟೆಸ್ಟ್ ಮಾಡಸಿ ವರದಿ ಸಿಗಲು ಸುಮಾರು 8 ತಾಸುಗಳು ಬೇಕಾಗುತ್ತೆ. ಆದ್ರೆ ಈ ಕಿಟ್‌ನಲ್ಲಿ ಕೇವಲ 30 ನಿಮಿಷದಲ್ಲೇ ರಿಪೋರ್ಟ್ ಕೈಸೇರುತ್ತೆ. ಹಾಗಾಗಿ ಜಿಲ್ಲಾಡಳಿತ ಱಪಿಡ್‌ ಆ್ಯಂಟಿಜೆನ್ ಕಿಟ್‌ ಬಳಕೆಗೆ ಮುಂದಾಗಿದೆ.

ಈಗಾಗಲೇ 10 ಸಾವಿರ ಕಿಟ್‌ಗಳನ್ನ ತರಿಸಲಾಗಿದ್ದು, ಟೆಸ್ಟಿಂಗ್‌ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿಮ್ಸ್ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಿಟ್‌ಗಳನ್ನ ಬಳಕೆ ಮಾಡಲಾಗ್ತಿದೆ.

ಈ ಕಿಟ್​ನ ಬಳಕೆಯಿಂದ ಶೀಘ್ರವೇ ವರದಿ ಸಿಗುವ ಕಾರಣ ಕೂಡಲೇ ಸೋಂಕಿತರನ್ನ ಕೊವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಬಹುದು. ಒಂದು ಕಿಟ್‌ನಿಂದ ಸುಮಾರು 25 ಜನರಿಗೆ ಕೊರೊನಾ ಟೆಸ್ಟ್ ಮಾಡುವ ಸಾಧ್ಯತೆಯಿದೆ. ಸದ್ಯಕ್ಕೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜಿಲ್ಲೆಯಲ್ಲಿ ಸರ್ವೆ ನಡೆಸ್ತಿದ್ದಾರೆ. ಸೋಂಕಿನ ಲಕ್ಷಣಗಳು ಇರೋರು ಹಾಗೂ ವೃದ್ಧರು ಜೊತೆಗೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರೋರನ್ನ ಪತ್ತೆ ಹಚ್ಚಿ ಅವರಿಗೆ ಈ ಱಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಹೆಚ್ಚೆಚ್ಚು ಟೆಸ್ಟ್‌ಗಳನ್ನ ಮಾಡೋ ಮೂಲಕ ಕೊರೊನಾ ಮಹಾಮಾರಿಯನ್ನ ಹತೋಟಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ.

Related Tags:

Related Posts :

Category:

error: Content is protected !!