ಉತ್ತಮ ಇಳುವರಿ ಬಂದ್ರೂ ಒಳ್ಳೆಯ ದರ ಸಿಗ್ತಿಲ್ಲ, ರೈತರ ಗೋಳು ಕೇಳೂರ್ಯಾರು

ಬಳ್ಳಾರಿ: ಆ ಭಾಗದ ರೈತರಿಗೆ ಜಮೀನಲ್ಲಿ ನಿರೀಕ್ಷೆಗಿಂತ ಹೆಚ್ಚು ಇಳುವರಿ ಬಂದಿತ್ತು. ಒಳ್ಳೆ ಮಳೆಯಾಗಿರೋದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದ್ರೆ, ಲಾಭದ ಕನಸು ಕಂಡಿದ್ದ ರೈತರು ಶಾಕ್ ಆಗಿದ್ದಾರೆ.

ರೊಟ್ಟಿ ಸವೀಲಿ.. ರಾಗಿಮುದ್ದೆ ತಿನ್ಲಿ.. ಒಬ್ಬಟ್ಟಾದ್ರೂ ಚಪ್ಪರಿಸ್ಲಿ.. ಊಟ ಆದ್ಮೇಲೆ ಲಾಸ್ಟ್​​ಗೆ ಒಂದ್ ಚೂರು ರೈಸ್​​ ತಿನ್ಲಿಲ್ಲ ಅಂದ್ರೆ ನೆಮ್ಮದಿನೇ ಆಗಲ್ಲ.. ದೇಶದಲ್ಲಿ ರೈಸ್ ಪ್ರಿಯರೇ ಹೆಚ್ಚು. ಅದ್ರಲ್ಲೂ, ಬರ ಪ್ರವಾಹದಿಂದ ಕಂಗೆಟ್ರೂ ರೈತರು ಭತ್ತ ಬೆಳೆಯೋದನ್ನ ಇನ್ನೂ ಕಡಿಮೆ ಮಾಡಿಲ್ಲ. ಅಂತದ್ರಲ್ಲಿ ಒಳ್ಳೆ ಭತ್ತದ ಇಳುವರಿ ಬಂದಿದ್ರೂ ಅನ್ನದಾತರ ಬದುಕಲ್ಲಿ ಬರಸಿಡಿಲು ಅಪ್ಪಳಿಸಿದೆ.

ಉತ್ತಮ ಇಳುವರಿ ಬಂದ್ರೂ ಒಳ್ಳೆಯ ದರ ಸಿಗ್ತಿಲ್ಲ..!
ಯೆಸ್​.. ಇಷ್ಟು ದಿನ ಮಳೆ ಇಲ್ಲ. ಸರಿಯಾದ ನೀರಿಲ್ಲ ಅಂತ ರೈತರು ಗೊಣಗ್ತಿದ್ರು. ಆದ್ರೆ, ಈ ವರ್ಷ ಸುರಿದ ಅಬ್ಬರದ ಮಳೆಗೆ ತುಂಗಭದ್ರಾ ಡ್ಯಾಂ ಭಾಗದ ರೈತರು ಉತ್ತಮ ಭತ್ತ ಬೆಳೆದಿದ್ದಾರೆ. ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಇಳುವರಿ ಬಂದಿದೆ. ಆದ್ರೆ, ಅರಬ್ ದೇಶಗಳಲ್ಲಿ ಸೋನಾ ಮಸೂರಿ ಅಕ್ಕಿಗೆ ಡಿಮ್ಯಾಂಡ್ ಕಡಿಮೆಯಾಗಿರೋದು ರೈತರ ನಿದ್ದೆಗೆಡಿಸಿದೆ. ಅಲ್ದೇ, ಮಾರ್ಕೆಟ್​ನಲ್ಲಿ ಬೇಡಿಕೆಗಿಂತ ಮಾಲು ಹೆಚ್ಚಾಗಿರೋದ್ರಿಂದ ಕಡಿಮೆ ರೇಟ್​ಗೆ ಭತ್ತ, ಅಕ್ಕಿ ಕೇಳ್ತಿದ್ದಾರಂತೆ. ಜೊತೆಗೆ ಚೆನ್ನೈ, ಹೈದರಾಬಾದ್, ಬೆಂಗಳೂರಲ್ಲೂ ಸೋನಾ ಮಸೂರಿ ಅಕ್ಕಿ ಕೇಳೋರಿಲ್ವಂತೆ. ಹೀಗಾಗಿ ಅನ್ನದಾತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇನ್ನು, ಈ ಬಾರಿ ತುಂಗಭದ್ರಾ ಡ್ಯಾಂ ತುಂಬಿದ್ದು, ನದಿ ಪಾತ್ರದ ಜನ ಈಗಾಗಲೇ 2ನೇ ಬೆಳೆ ಬೆಳೆಯೋಕೆ ರೆಡಿಯಾಗಿದ್ದಾರೆ. ಆದ್ರೆ, ಈ ವರ್ಷ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಮರ್ಪಕ ಬೆಲೆ ಸಿಗ್ತಿಲ್ಲ. ಇದರ ಜೊತೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಭತ್ತ ಖರೀದಿಗೆ ಮಾರ್ಕೆಟ್​ನಲ್ಲಿ ಖರೀದಿ ಕೇಂದ್ರ ಕೂಡ ತೆರೆದಿದೆ. ಒಂದು ಕ್ವಿಂಟಾಲ್ ಭತ್ತಕ್ಕೆ 1815 ರೂಪಾಯಿ, ಎ-ಗ್ರೇಡ್ ಭತ್ತಕ್ಕೆ 1835 ರೂಪಾಯಿಯಂತೆ ಖರೀದಿಸಲಾಗ್ತಿದೆ. ಇದಕ್ಕೆ ಸಾಕಷ್ಟು ರೂಲ್ಸ್ ಅಂಡ್ ರೆಗ್ಯುಲೇಷನ್ ಇರೋದ್ರಿಂದ ಕಡಿಮೆ ರೇಟ್​ಗೆ ಬೆಳೆದ ಬೆಳೆಯನ್ನ ರೈತರು ಸೇಲ್ ಮಾಡ್ತಿದ್ದಾರೆ.

ಒಟ್ನಲ್ಲಿ, ಇಷ್ಟು ದಿನ ಬೆಳೆದ ಬೆಳೆ ಕೈಗೆ ಸಿಕ್ತಿಲ್ಲ ಅಂತಿದ್ದ ರೈತರು ಉತ್ತಮ ಇಳುವರಿ ಬಂದಿದ್ರೂ ಬರಸಿಡಿಸಲು ಅಪ್ಪಳಿಸಿದೆ. ವಿದೇಶಕ್ಕೆ ಅಕ್ಕಿ ರಫ್ತು ಕಡಿಮೆಯಾಗಿರೋದು ಒಳ್ಳೆ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more