ಲಾಕ್‌ಡೌನ್ ವೇಳೆ ಜಪ್ತಿಯಾದ ವಾಹನಗಳು ವಾಪಸ್! *Conditions Apply

ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಇಡೀ ಬೆಂಗಳೂರು ಲಾಕ್‌ಡೌನ್ ಆಗಿದ್ದಾಗ ಅನೇಕ ಮಂದಿ ತಮ್ಮ ವಾಹನಗಳಲ್ಲಿ ನಗರ ಸಂಚಾರಕ್ಕೆ ಬಂದಿದ್ದರು. ಆವೇಳೆ ನಗರ ಪೊಲೀಸರು ನಿರ್ದಾಕ್ಷಿಣ್ಯವಾಗಿ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಕಂಗಾಲಾಗಿದ್ದ ವಅಹನ ಸವಾರರು ಮತ್ತೆ ಯಾವಾಗಪ್ಪಾ ನಮ್ಮ ವಾಹನಗಳು ನಮ್ಮ ಕೈಸೇರುವುದು ಎಂದು ತಲೆ ಮೇಲೆ ಕೈಹೊತ್ತಿ ಕುಳಿತಿದ್ದರು. ವಾಹನಗಳು ವಾಪಾಸಾಗೋದು ಮೂರು ತಿಂಗಳಿಗಂತೆ/ ಆರು ತಿಂಗಳಿಗಂತೆ, ಪೊಲೀಸರು ಎಫ್​ಐಆರ್ ಹಾಕಿದಾರಂತೆ ಕೋರ್ಟಿಗೇ ಹೋಗಿ ಬಿಡಿಸಿಕೊಂಡುಬರಬೇಕಂತೆ ಎಂದೆಲ್ಲಾ ವಾಹನ ಸವಾರರ ಆತಂಕ ಮತ್ತಷ್ಟು ಹೆಚ್ಚಿಸುವ ಮಾತುಗಳು ಕೇಳಿಬಂದಿದ್ದವು.

ಆದ್ರೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್‌ ರಾವ್‌ ಇದಕ್ಕೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪೊಲೀಸ್​ ಆಯುಕ್ತರು ಲಾಕ್‌ಡೌನ್ ಆರಂಭದ ದಿನಗಳಲ್ಲಿ ಸೀಜ್‌ ಆಗಿರುವ ವಾಹನಗಳನ್ನು ಮೇ 1ರಿಂದ ವಾಪಸ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Conditions Apply:
ಸಿಎಂ, ಗೃಹ ಸಚಿವರ ಅನುಮತಿ ಮೇರೆಗೆ ವಾಹನಗಳ ವಾಪಸ್​ ನೀಡುತ್ತೇವೆ. ಆದ್ರೆ ಅದಕ್ಕೂ ಮುನ್ನ ವಾಹನಗಳ ದಾಖಲೆ ಪರಿಶೀಲಿಸಿ, ವಾಪಸ್ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ 47,000 ವಾಹನ ಜಪ್ತಿ ಮಾಡಲಾಗಿದೆ. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದೆವು. ಜಪ್ತಿ ಮಾಡಿರುವ ವಾಹನ ಹಿಂತಿರುಗಿಸಲು ನಿರ್ಧರಿಸಲಾಗಿದೆ. ಆಯಾ ಠಾಣೆಯಲ್ಲಿ ವಾಹನಗಳನ್ನು ವಾಪಸ್ ನೀಡಲಾಗುವುದು. ಆದ್ರೆ ಅದಕ್ಕೂ ಮೊದಲು ಎನ್‌ಡಿಎಂಎ ಕಾಯ್ದೆಯನ್ವಯ ಶುಲ್ಕ ಪಡೆಯಲಾಗುವುದು. ಮೊದಲು ಜಪ್ತಿ ಮಾಡಿದ ವಾಹನಗಳನ್ನು ಮೊದಲು ನೀಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

Related Tags:

Related Posts :

Category: