ಬೆಂವಿವಿ ಕರ್ಮಕಾಂಡ: ವ್ಯಾಸಂಗ ಮುಗಿದರೂ ಹಾಸ್ಟೆಲ್​ನಲ್ಲೇ ಉಳಿದವರಿಂದ ಬರ್ತ್​ಡೇ ದಾಂಧಲೆ

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಅದರ ವಿದ್ಯಾರ್ಥಿ ನಿಲಯಗಳಲ್ಲಿನ ಗೋಳು ಇಂದು, ನಿನ್ನೆಯದಲ್ಲ. ಸದಾ ಬೂದಿ ಮುಚ್ಚಿದ ಕೆಂಡದಂತಿರುವ ಬೆಂವಿವಿ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಶಿಕ್ಷಣ ಮುಗಿದರೂ ಹಾಸ್ಟೆಲ್​ಗಳಲ್ಲೇ ವಾಸ್ತವ್ಯ ಮುಂದುವರಿಸುವ ವಿದ್ಯಾರ್ಥಿಗಳ ಹಿಡಿತದಲ್ಲಿ ಹಾಸ್ಟೆಲ್​ ವಿದ್ಯಾರ್ಥಿಗಳು ನರಳುತ್ತಿದ್ದಾರೆ ಎಂಬ ಆರೋಪ ವಿದ್ಯಾರ್ಥಿಗಳಿಂದಲೇ ಕೇಳಿ ಬಂದಿದೆ.

ಹುಟ್ಟುಹಬ್ಬದ ವಿಚಾರಕ್ಕೆ ಗಲಾಟೆ:
ತಾಜಾ ಪ್ರಕರಣದಲ್ಲಿ ಹುಟ್ಟುಹಬ್ಬದ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ತಡರಾತ್ರಿ ಗಲಾಟೆಯಾಗಿದೆ. ಬೆಂಗಳೂರು ವಿವಿಯ ಪಿಜಿ2 ಹಾಸ್ಟೆಲ್​ನಲ್ಲಿ ಬರ್ತ್​ಡೇ ಕೇಕ್ ಕಟ್ ಮಾಡುವ ವಿಚಾರದಲ್ಲಿ ದಾಂಧಲೆ ನಡೆಸಿದ್ದಾರೆ.

8 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ:
ಪಿಹೆಚ್‌ಡಿ ಮುಗಿಸಿದ ಬಳಿಕವೂ ಹಾಸ್ಟೆಲ್​ನಲ್ಲಿ ಬೀಡುಬಿಟ್ಟಿರುವವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆ ಮಾಡಲು ಯತ್ನಿಸಿದವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಎರಡೂ ಬಣದ 8 ವಿದ್ಯಾರ್ಥಿಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.



Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!