ಬ್ಯಾಂಕ್ ದಂಪತಿ ಅಟ್ಯಾಕ್ ಕೇಸ್: ತಮ್ಮನಿಂದಲೇ ನಡೀತಾ ಅಕ್ಕನ ಕೊಲೆ?

ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ ನಡೆದ ಬ್ಯಾಂಕ್ ದಂಪತಿ ಅಟ್ಯಾಕ್ ಕೇಸ್​ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಮೃತ ಮಹಿಳೆಯ ತಮ್ಮನಿಂದಲೇ ಆಕೆಯ ಕೊಲೆಯಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ವಿನೋದ್ ಹಾಗೂ ತ್ರಿವೇಣಿಯ ಮೇಲೆ ಮಹಿಳೆಯ ಸಹೋದರನಿಂದಲೇ ಮಾರಣಾಂತಿಕ ಹಲ್ಲೆ ನಡೆಯಿತು ಅನ್ನೋ ಗುಮಾನಿ ಹುಟ್ಟಿದೆ.

ಇದಕ್ಕೆ ಪೂರಕವೆಂಬಂತೆ ತ್ರಿವೇಣಿ ಸಹೋದರ ಅವಿನಾಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಬ್ಯಾಂಕ್​ ಉದ್ಯೋಗಿಗಳಾಗಿದ್ದ ವಿನೋದ್ ಹಾಗೂ ತ್ರಿವೇಣಿ ದಂಪತಿ ಮೇಲೆ ನಿನ್ನೆ ರಾಡ್​ನಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆಗೊಳಗಾಗಿದ್ದ ತ್ರಿವೇಣಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಗಂಭೀರವಾಗಿ ಗಾಯಗೊಂಡ ವಿನೋದ್​ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

ತನ್ನ ಅಕ್ಕ ವಿನೋದ್​ನನ್ನು ಪ್ರೀತಿಸಿ ಮದುವೆಯಾದ ಸಿಟ್ಟಿಗೆ ಅವಿನಾಶ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸದ್ಯ ತ್ರಿವೇಣಿ ಸಹೋದರ ಅವಿನಾಶ್​ನನ್ನು ವಶಕ್ಕೆ ಪಡೆದ ಪೊಲೀಸರು ಇನ್ನುಳಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

ಮೃತದೇಹ ಪಡೆಯಲು ಕುಟುಂಬಸ್ಥರ ಹಿಂದೇಟು
ಇತ್ತ ಘಟನೆಯಲ್ಲಿ ಮೃತಪಟ್ಟ ತ್ರಿವೇಣಿ ಶವವನ್ನು ಕಾರಟಗಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆದರೆ, ಮೃತ ಬ್ಯಾಂಕ್​ ಉದ್ಯೋಗಿಯ ಕುಟುಂಬಸ್ಥರು ಆಕೆಯ ಮೃತದೇಹ ಪಡೆಯಲು ಮುಂದಾಗುತ್ತಿಲ್ಲವಂತೆ. ಹಾಗಾಗಿ, ತ್ರಿವೇಣಿ ಮೃತದೇಹ ಅನಾಥ ಶವವಾಗಿ ಉಳಿದಿದೆ.

ಕಾರಟಗಿಯ IDFC ಬ್ಯಾಂಕ್ ಶಾಖೆಯಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಗಳಾಗಿದ್ದ ವಿನೋದ್ ಹಾಗೂ ತ್ರಿವೇಣಿ ಮೇಲೆ ಹಲ್ಲೆ ನಡೆಸಲಾಗಿತ್ತು. ತ್ರಿವೇಣಿ ಮತ್ತು ವಿನೋದ್
6 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು.

Related Tags:

Related Posts :

Category:

error: Content is protected !!