ಬಸವನಗುಡಿಯ ಕಡೆ ಯಾರೂ, ಇನ್ನಾರು ದಿನ ಬರಬೇಡಿ

  • TV9 Web Team
  • Published On - 10:43 AM, 30 Jun 2020

ಬೆಂಗಳೂರು: ಹಾಳು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇನ್ನು ಆರು ದಿನ ಯಾರೂ ನಗರದ ಆಯಕಟ್ಟಿನ ಜಾಗದಲ್ಲಿರುವ ಬಸವನಗುಡಿಯ ಕಡೆ ಹೆಜ್ಜೆ ಹಾಕಬೇಡಿ ಎಂದು ಸ್ಥಳೀಯ ವರ್ತಕರು ಗ್ರಾಹಕರನ್ನು ಕೋರಿದ್ದಾರೆ.

ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಕ್ಲೋಸ್ ಮಾಡಿ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಬಸವನಗುಡಿ ಮರ್ಚೆಂಟ್ ಫೌಂಡೇಶನ್ ಅವರಿಂದ ಈ ನಿರ್ಧಾರ ಹೊರಬಿದ್ದಿದ್ದು ಇಂದಿನಿಂದ ಆರು ದಿನಗಳ ಕಾಲ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮಾಲೀಕರು ತಮ್ಮ ತಮ್ಮ ಅಂಗಡಿಗಳನ್ನ ಕ್ಲೋಸ್ ಮಾಡಿ ಷಟರ್​ ಮೇಲೆ ನೊಟೀಸ್ ಅಂಟಿಸಿದ್ದಾರೆ. ಇದೇ ವೇಳೆ,ಬಸವನಗುಡಿ ಮತ್ತು ಎನ್​ ಆರ್​ ಕಾಲನಿಯಲ್ಲೂ ತರಕಾರಿ ಮತ್ತು ದಿನಸಿ ಅಂಗಡಿಗಳ ಮಾಲೀಕರೂ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ನಿಗದಿತ ವೇಳೆಯಲ್ಲಿ ನಿಗದಿತ ಪ್ರದೇಶದಲ್ಲಿ (ಎಪಿಎಸ್ ಮೈದಾನ) ವ್ಯಾಪಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.