ಸ್ವಚ್ಛತೆ ಪಾಠ ಹೇಳಿಕೊಡುವ ಬಿಬಿಎಂಪಿಯಲ್ಲಿ ಇಲಿಗಳ ಕಾಟ

ಬೆಂಗಳೂರು: ಸ್ವಚ್ಛತೆ ಪಾಠ ಹೇಳಿಕೊಡಬೇಕಾದ ಬಿಬಿಎಂಪಿಯೇ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ತನ್ನ ಕಚೇರಿಯಲ್ಲೇ ನೂರಾರು ಸಮಸ್ಯೆ ಎದುರಿಸುತ್ತಿದೆ. ಬಿಬಿಎಂಪಿಯಲ್ಲಿ ಮೂಷಿಕ ಸಾಮ್ರಾಜ್ಯ ಕಟ್ಟಿಕೊಂಡಿದೆ.

ಮಹಾಪೌರರನ್ನು ಕಾಡುತ್ತಿವೆ ಇಲಿಗಳು, ಬಿಬಿಎಂಪಿ ಕಚೇರಿಯಲ್ಲೇ ಸಮಸ್ಯೆ!
ಕ್ಲೀನ್ ಕ್ಲೀನ್ ಅಂತಾ ಸಿಲಿಕಾನ್ ಸಿಟಿ ಜನರಿಗೆಲ್ಲಾ ಸ್ವಚ್ಛತೆಯ ಪಾಠ ಹೇಳಿಕೊಡುವ ಬಿಬಿಎಂಪಿಗೆ ತನ್ನ ಕಚೇರಿಯಲ್ಲೇ ಇಲಿಗಳ ಕಾಟ ಶುರುವಾಗಿದೆ. ಕೆಲವರ್ಷಗಳ ಹಿಂದೆ ಪಾಲಿಕೆ ಇಲಿ ಹಿಡಿಯೋದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೀವ್ರ ಟೀಕೆಗೂ ಗುರಿಯಾಗಿತ್ತು.

ಇಷ್ಟುದಿನ ಬಿಬಿಎಂಪಿ ಕಚೇರಿಯಲ್ಲಿ ಆ ಕಡೆ, ಈ ಕಡೆ ಸುತ್ತಾಡುತ್ತಿದ್ದ ಇಲಿಗಳ ಸಾಮ್ರಾಜ್ಯ, ನೇರವಾಗಿ ಮೇಯರ್ ಕುರ್ಚಿ ಕೆಳಗೆ ದಾಳಿಯಿಟ್ಟಿದೆ. ಮೇಯರ್ ಕ್ಯಾಬಿನ್​ನಲ್ಲಿ ಎಲ್ಲೆಂದರಲ್ಲಿ ಇಲಿಗಳು ದಾಳಿ ಮಾಡಿ ವಸ್ತುಗಳನ್ನ ಹಾಳು ಮಾಡುತ್ತಿವೆ.

ಬಿಬಿಎಂಪಿಯಲ್ಲಿ ಇಲಿಗಳು ಕಾಟಕೊಡ್ತಿವೆ ಅನ್ನೋ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಅದರಲ್ಲೂ ಮೇಯರ್ ಕಚೇರಿಯಲ್ಲಿ ಇಂತಹ ಸಮಸ್ಯೆ ಇದೆ ಅನ್ನೋದು ಮತ್ತಷ್ಟು ಜೋಕ್ ಕ್ರಿಯೇಟ್ ಮಾಡಿದ್ದು, ಸ್ವಚ್ಛೆತೆಯ ಪಾಠ ಹೇಳುವವರ ಬಗ್ಗೆ ಜನ ಕುಹಕವಾಡುತ್ತಿದ್ದಾರೆ.

Related Tags:

Related Posts :

Category:

error: Content is protected !!