ಕೊರೊನಾ ವಿಚಾರದಲ್ಲಿ BBMP ಸಾಲುಸಾಲು ಎಡವಟ್ಟು, ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣ ಏನು?

ಬೆಂಗಳೂರು: ಡೆಡ್ಲಿ ಕೊರೊನಾ ಜೀವನವನ್ನ ನರಕವನ್ನಾಗಿಸಿದೆ. ಸೋಂಕಿನ ಸುನಾಮಿಗೆ ತತ್ತರಿಸುವಂತೆ ಮಾಡಿದೆ. ರಾಜಧಾನಿಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಜೊತೆಗೆ ಕೊರೊನಾ ವಿಚಾರದಲ್ಲಿ ಬಿಬಿಎಂಪಿ ಸಾಲುಸಾಲು ಎಡವಟ್ಟುಗಳನ್ನು ಮಾಡುತ್ತಿದೆ.

ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಬಿಬಿಎಂಪಿ ಸೋತಿದೆ. ಕೊರೊನಾ ವಿಚಾರದಲ್ಲಿ ಬಿಬಿಎಂಪಿ ಸಾಲುಸಾಲು ಎಡವಟ್ಟುಗಳನ್ನು ಮಾಡುತ್ತಿದೆ. ಬಿಬಿಎಂಪಿಗೆ ಕೊರೊನಾ ಸೋಂಕಿತರ ಲೆಕ್ಕ ಮಾತ್ರ ಸಿಗುತ್ತಿದೆ. ಕೊರೊನಾದಿಂದ ಗುಣಮುಖರಾದವರ ಲೆಕ್ಕ ಸಿಗುತ್ತಿಲ್ಲವಾ? ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಹೋಂ ಐಸೋಲೇಷನ್‌ ಆದವರ ಬಗ್ಗೆ BBMPಗೆ ಮಾಹಿತಿ ಸಿಗುತ್ತಿಲ್ಲ. ಸೋಂಕಿತರಿಗೆ ಸರಿಯಾಗಿ BU ನಂಬರ್ ಸಹ ನೀಡುತ್ತಿಲ್ಲ. ಹೋಂ ಐಸೋಲೇಷನ್‌ ಆಗಿ ಗುಣಮುಖರಾದವರ ಲೆಕ್ಕ ಪಾಲಿಕೆ ಅಧಿಕಾರಿಗಳಿಗೆ ಸಿಗ್ತಿಲ್ಲ. ಪಾಸಿಟಿವ್‌ ಬಂದಾಗ ಮಾತ್ರ BBMP ಸಿಬ್ಬಂದಿ ಫೋನ್‌ ಮಾಡಿದ್ದೇ ಕೊನೆ. ಬಳಿಕ ಆರೋಗ್ಯ ಹೇಗಿದೆ ಅನ್ನೋದನ್ನೇ ವಿಚಾರಿಸುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಗುಣಮುಖರಾದವರ ಸಂಖ್ಯೆ ಕಡಿಮೆ ಆಗ್ತಿದ್ಯಾ? ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಕೊರೊನಾ ನಿಯಂತ್ರಿಸಲು ಸರಿಯಾದ ಯೋಜನೆಗಳನ್ನು ಮಾಡಲಾಗದೆ ಬಿಬಿಎಂಪಿ ವಿಫಲಬಾಗುತ್ತಿದೆ.

Related Tags:

Related Posts :

Category:

error: Content is protected !!