BBMPಗೆ 1.05 ಲಕ್ಷ ಕೊವಿಶೀಲ್ಡ್ ಲಸಿಕೆ ಹಸ್ತಾಂತರ

ಬಿಬಿಎಂಪಿಗೆ 1.05 ಲಕ್ಷ ಕೊವಿಶೀಲ್ಡ್ ಲಸಿಕೆ ಹಸ್ತಾಂತರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೊರೊನಾ ಲಸಿಕೆ ಹಸ್ತಾಂತರವಾಗಿದೆ.

  • TV9 Web Team
  • Published On - 18:08 PM, 13 Jan 2021
ಕೊವಿಶೀಲ್ಡ್ ಲಸಿಕೆ

ಬೆಂಗಳೂರು: ಬಿಬಿಎಂಪಿಗೆ 1.05 ಲಕ್ಷ ಕೊವಿಶೀಲ್ಡ್ ಲಸಿಕೆ ಹಸ್ತಾಂತರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೊರೊನಾ ಲಸಿಕೆ ಹಸ್ತಾಂತರವಾಗಿದೆ. ನಗರದ ದಾಸಪ್ಪ ಆಸ್ಪತ್ರೆಗೆ ಕೊವಿಶೀಲ್ಡ್ ಲಸಿಕೆ ಒಟ್ಟು ಮೂರು ಪೆಟ್ಟಿಗೆಗಳಲ್ಲಿ ಸ್ಥಳಾಂತರವಾಗಿದೆ.

ನಗರದ ಟೌನ್​ಹಾಲ್ ಮುಂಭಾಗದಲ್ಲಿರುವ ದಾಸಪ್ಪ ಆಸ್ಪತ್ರೆಗೆ, ವಾಹನದ ಮೂಲಕ ಲಸಿಕೆ ರವಾನೆಯಾಗಿದೆ. ಆನಂದರಾವ್ ವೃತ್ತದ ಲಸಿಕೆ ದಾಸ್ತಾನು ಕೇಂದ್ರದಿಂದ ದಾಸಪ್ಪ ಆಸ್ಪತ್ರೆಗೆ ಲಸಿಕೆ ಸ್ಥಳಾಂತರವಾಗಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ದಾಸಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೂಡ ದಾಸಪ್ಪ ಆಸ್ಪತ್ರೆಗೆ ಆಗಮಿಸಿದ್ದಾರೆ.

ದಾಸಪ್ಪ ಆಸ್ಪತ್ರೆಗೆ ಬಂತು ಕೊರೊನಾ ಲಸಿಕೆ

ಕೊರೊನಾ ಲಸಿಕೆ

ಕೊರೊನಾ ಲಸಿಕೆಯ ಆಗಮನ

ಲಸಿಕೆ ಸಂಗ್ರಹ ಪರಿಶೀಲನೆ

ಲಸಿಕೆ ಸಂಗ್ರಹ ಪರಿಶೀಲನೆ

ಕೊವಿಶೀಲ್ಡ್ ಲಸಿಕೆ

ಬೆಂಗಳೂರಿಗೆ ಬಂತು ಕೊರೊನಾ ಲಸಿಕೆ.. ಆದ್ರೆ BBMPಗೆ ಶುರುವಾಯ್ತು ತಲೆನೋವು!