ಅಕ್ರಮ ಕಟ್ಟಡಗಳ ಮಾಹಿತಿ ಕಲೆಹಾಕಲು ಬಿಬಿಎಂಪಿ ಮೀನಮೇಷ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದ್​ ಹಿಡಿ ಜಾಗ ಇಲ್ಲದಂಗೆ ಎಲ್ಲಾ ಕಡೆ ಬಿಲ್ಡಿಂಗ್​ಗಳು ತಲೆ ಎತ್ತಿವೆ. ಎತ್ತ ನೋಡಿದ್ರು ಕಟ್ಟಡಗಳು ರಾರಾಜಿಸ್ತಿವೆ. ಅಭಿವೃದ್ಧಿ ಹಿಂದೆ ಓಡ್ತಿರೋ ಸಿಟಿಯಲ್ಲಿ ಅಕ್ರಮಗಳು ಅಧಿಕವಾಗ್ತಿದೆ. ಅದಕ್ಕೆ ಕಾರಣ ಬಿಬಿಎಂಪಿ ಅಧಿಕಾರಿಗಳ ಗಾಢ ನಿದ್ರೆ.

ಅಕ್ರಮ ಕಟ್ಟಡಗಳ ಮಾಹಿತಿ ಕಲೆಹಾಕಲು ಬಿಬಿಎಂಪಿ ಮೀನಮೇಷ..!
ಯೆಸ್.. ಬೆಂಗಳೂರಿನಲ್ಲಿ ದಶ ದಿಕ್ಕಲ್ಲೂ ಅಕ್ರಮವಾಗಿ ಸಾವಿರಾರು ಅಪಾರ್ಟ್​ಮೆಂಟ್, ವಿಲ್ಲಾಗಳನ್ನ ನಿರ್ಮಿಸ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಎಷ್ಟೇ ದೂರು ನೀಡಿದ್ರು ಪಾಲಿಕೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಮೊನ್ನೆಯಷ್ಟೇ ಪುಟ್ಟೇನಹಳ್ಳಿಯಲ್ಲಿರೋ 4 ಅಂತಸ್ತಿನ ನಿಶಿತಾ ಪ್ಲಾಟಿನಂ ಅಪಾರ್ಟ್ಮೆಂಟ್​ ಡೆಮಾಲಿಷನ್​ಗೆ ಹೈಕೋರ್ಟ್ ಆದೇಶಿಸಿತ್ತು.

ಪ್ಲ್ಯಾನ್ ಅಪ್ರೂವಲ್ ಪಡೆಯದೇ ಬಿಬಿಎಂಪಿ ಬೈಲಾ ಉಲ್ಲಂಘಿಸಿ ಅಪಾರ್ಟ್​​ಮೆಂಟ್ ನಿರ್ಮಿಸಿದ್ದಾರೆ ಅಂತ ಕೋರ್ಟ್ ಹೇಳಿತ್ತು. ಆದ್ರೆ, ಅಕ್ರಮ ಕಟ್ಟಡಗಳ ಬಗ್ಗೆ ಹೈಕೋರ್ಟ್ ವರದಿ ಬಿಬಿಎಂಪಿ ಇನ್ನೂ ಕೂಡ ಸರ್ವೆ ಶುರುಮಾಡಿಲ್ಲ. ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆ 1976ರ ಕಲಂ 321ರ 1, 2ರ ಅಡಿಯಲ್ಲಿ ಡೆಮಾಲಿಷನ್​ಗೆ ಅವಕಾಶವಿದೆ. ಆದ್ರೆ ಬಿಬಿಎಂಪಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರನ್ನ ಕೇಳಿದ್ರೆ ಮಾಹಿತಿ ಕಲೆ ಹಾಕ್ತಿದ್ದೀವಿ ಅಂತಿದ್ದಾರೆ.

ಮಾಹಿತಿ ಕಲೆ ಹಾಕುತ್ತಿದ್ದೇವೆ:
ಅಕ್ರಮ ಕಟ್ಟಡಗಳ ಬಗ್ಗೆ ಹಂತ ಹಂತವಾಗಿ ಮಾಹಿತಿ ಕಲೆ ಹಾಕಲು ಸಿದ್ಧತೆ ನಡೆದಿದೆ. ಆದಷ್ಟು ಬೇಗ ವರದಿಯನ್ನ ಕೋರ್ಟ್​ಗೆ ಸಲ್ಲಿಸುತ್ತೇವೆ.
-ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

ಇನ್ನೂ ಅಕ್ರಮ ಕಟ್ಟಡಗಳನ್ನ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳೇ ಕುಮ್ಮಕ್ಕು ನೀಡ್ತಿದ್ದಾರೆ. ಮೊದಲು ಅಕ್ರಮ ಕಟ್ಟಡಗಳಿಗೆ ಅನುಮತಿ ಕೊಟ್ಟ ಅಧಿಕಾರಿಗಳಿಗೆ ಶಿಕ್ಷೆ ಅಗ್ಬೇಕು, ಅದು ಕೂಡಾ ಆಗ್ತಿಲ್ಲ. ವರದಿ ನೀಡುವಂತೆ ಹೈಕೋರ್ಟ್ ಆದೇಶ ಮಾಡಿದ್ರು ಯಾರೂ ಕ್ಯಾರೇ ಅಂತಿಲ್ಲ.

ಒಟ್ನಲ್ಲಿ, ಕೋರ್ಟ್ ಕೇಳಿದ ಕಟ್ಟಡವನ್ನೇನೋ ಬಿಬಿಎಂಪಿ ಡೆಮಾಲಿಷನ್ ಮಾಡ್ತಿದೆ. ಆದ್ರೆ, ಕಣ್ಣೆದುರಲ್ಲೇ ಅಕ್ರಮವಾಗಿ ಸಾವಿರಾರು ಕಟ್ಟಡಗಳು, ಅಪಾರ್ಟ್​ಮೆಂಟ್​ಗಳು ತಲೆ ಎತ್ತಿದ್ರೂ ಇವರ ದೃಷ್ಟಿಗೆ ಬೀಳ್ತಿಲ್ಲ. ಅದ್ರಲ್ಲೂ ಅಕ್ರಮ ಕಟ್ಟಡಗಳ ಮಾಹಿತಿ ಕಲೆ ಹಾಕೋಕೆ ಪಾಲಿಕೆ ಹಿಂದೇಟು ಹಾಕ್ತಿರೋದು ಅನುಮಾನ ಮೂಡಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!