ಬೆಂಗಳೂರಿಗೆ ಬಂತು ಕೊರೊನಾ ಲಸಿಕೆ.. ಆದ್ರೆ BBMPಗೆ ಶುರುವಾಯ್ತು ತಲೆನೋವು!

ಸಿಕೆ ಬಂದ ಮೇಲೆ ಬಿಬಿಎಂಪಿಯ ಜವಾಬ್ದಾರಿ ಹೆಚ್ಚಲಿದೆ. ಲಸಿಕೆ ನೀಡುವ ಪ್ರತಿಯೊಬ್ಬ ವ್ಯಕ್ತಿಯ ನಿಗಾ ಇಡುವುದು ದೊಡ್ಡ ಸಾವಾಲಾಗಿದೆ ಎಂದು BBMP ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

  • TV9 Web Team
  • Published On - 14:57 PM, 12 Jan 2021
ಬಿಬಿಎಂಪಿ ಮುಖ್ಯ ಕಚೇರಿ

ಬೆಂಗಳೂರು: ದೇಶಕ್ಕೆ ಇಂದು ಮಹತ್ವದ ದಿನ. ಯಾಕಂದ್ರೆ ಮಹಾಮಾರಿ ಕೊರೊನಾವನ್ನು ಸಂಹಾರ ಮಾಡುವ ಲಸಿಕೆ ಬಹುತೇಕ ಜಿಲ್ಲೆಗಳಿಗೆ ಕಾಲಿಟ್ಟಿದೆ. ಇನ್ನೇನು ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ಕೊವಿಶೀಲ್ಡ್ ಲಸಿಕೆ ಸಿಕ್ಕಿದೆ ಎನ್ನವಷ್ಟರಲ್ಲೇ ಬಿಬಿಎಂಪಿಗೆ ತಲೆನೋವೊಂದು ಶುರುವಾಗಿದೆ.

ಹೌದು ಲಸಿಕೆ ಬಂದ ಮೇಲೆ ಬಿಬಿಎಂಪಿಯ ಜವಾಬ್ದಾರಿ ಹೆಚ್ಚಲಿದೆ. ಲಸಿಕೆ ನೀಡುವ ಪ್ರತಿಯೊಬ್ಬ ವ್ಯಕ್ತಿಯ ನಿಗಾ ಇಡುವುದು ದೊಡ್ಡ ಸಾವಾಲಾಗಿದೆ ಎಂದು BBMP ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಮೊದಲ ಹಂತದಲ್ಲಿ ಹೆಲ್ತ್ ವಾರಿಯರ್ಸ್​ಗೆ ಲಸಿಕೆ ನೀಡಲಾಗುತ್ತೆ. ಈವರೆಗೆ 1.68 ಲಕ್ಷ ವಾರಿಯರ್ಸ್ ಹೆಸರು ನಮೂದು ‌ಮಾಡಲಾಗಿದೆ. ಆದರೆ ವ್ಯಾಕ್ಸಿನ್ ಪಡೆಯೋದು ಯಾರಿಗೂ ಕಡ್ಡಾಯವಲ್ಲ. ಜೊತೆಗೆ ವ್ಯಾಕ್ಸಿನ್ ಪಡೆದವರ ಮೇಲೆ ನಿಗಾ ಇಡೋದು ತುಂಬಾನೇ ಕಷ್ಟವೆಂದು BBMP ಅಧಿಕಾರಿಗಳ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು ತಲುಪಿದ ಕೊವಿಶೀಲ್ಡ್ ಲಸಿಕೆ..