ರಾಜಧಾನಿಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ, ಯಾಕೆ?

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಇತ್ತೀಚೆಗೆ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಶೇಕಡಾ 90ರಷ್ಟು ಸೋಂಕಿತರು ಆಸ್ಪತ್ರೆಗೆ ಸೇರಿದ ಮೂರು ದಿನದಲ್ಲೇ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಮರಣ ಪ್ರಮಾಣದ ಏರಿಕೆಗೆ ಕಾರಣವೇನು ಎಂದು ತಿಳಿಯಲು ಬಿಬಿಎಂಪಿ ಮುಂದಾಗಿದೆ.

ಮಾಹಿತಿ ಸಂಗ್ರಹಕ್ಕೆ ಮುಂದಾಗಿರೋ ಬಿಬಿಎಂಪಿಯ ವರದಿಯಲ್ಲಿ ಈ ಕೆಲವು ಕಾರಣಗಳು ತಿಳಿದುಬಂದಿದೆ. ಅವುಗಳೇನೆಂದರೆ, ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸೇರಿಸೋದ್ರಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಒಂದು ಕಾರಣ ಕೊವಿಡ್ ಟೆಸ್ಟ್ ರಿಪೋರ್ಟ್ ಬರಲು ಐದಾರು ದಿನ ತಡವಾಗುತ್ತಿದೆ. ಪರೀಕ್ಷಾ ವರದಿ ಬರೋ ಮುನ್ನ ಆಸ್ಪತ್ರೆಗಳು ಸೋಂಕಿತರನ್ನ ದಾಖಲಿಸಿಕೊಳ್ಳುತ್ತಿಲ್ಲ. ರಿಪೋರ್ಟ್ ಬರುವಷ್ಟರಲ್ಲಿ ಸೋಂಕಿತರ ಆರೋಗ್ಯ ಸ್ಥಿತಿ ಮತ್ತಷ್ಟು ಇಳಿಮುಖವಾಗಿರುತ್ತದೆ. ಹಾಗಾಗಿ, ಆಸ್ಪತ್ರೆಗೆ ಸೇರಿದ ಕೆಲವು ದಿನಗಳಲ್ಲೇ ಸೋಂಕಿಗೆ ಉಸಿರು ಚೆಲ್ಲುತ್ತಿದ್ದಾರೆ.

ಜೊತೆಗೆ, ಬೆಂಗಳೂರಲ್ಲಿ ನಾನಾ ಕಾಯಿಲೆಯಿಂದ ಬಳಲುವವರು ಹೆಚ್ಚಿದ್ದಾರೆ. ಆದರೆ, ಇವರು ಮುಂಚಿತವಾಗಿ ಕೊವಿಡ್​ ಟೆಸ್ಟ್ ಮಾಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಅವರು ಮೊದಲೇ ಟೆಸ್ಟ್​ ಮಾಡಿಸಿಕೊಂಡು ಅದರಲ್ಲಿ ಪಾಸಿಟಿವ್​ ಬಂದರೇ ಕೂಡಲೇ ಚಿಕಿತ್ಸೆ ನೀಡಬಹುದು. ಆದರೆ, ಇದು ಆಗುತ್ತಿಲ್ಲ. ಹೀಗಾಗಿ, ಇದು ಕೂಡ ಒಂದು ಕಾರಣವಾಗಿದೆ ಎಂದು ಬಿಬಿಎಂಪಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Related Tags:

Related Posts :

Category:

error: Content is protected !!