‘ನಾವು ರಾಜೀನಾಮೆ ಕೊಟ್ಟಿದ್ದಕ್ಕೇ ಸಿದ್ದರಾಮಯ್ಯಗೆ ಕಾರು, ಬಂಗ್ಲೆ ಸಿಕ್ಕಿದೆ!’

ಹಾವೇರಿ: ಹಿರೇಕೆರೂರು ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್​ ಅವರು ತಾಲೂಕಿನ ಹಂಸಭಾವಿಯಲ್ಲಿ ಇಂದು ತಮ್ಮ ಬೆಂಬಲಿಗರನ್ನು ಬಿಜೆಪಿ ಸೇರ್ಪಡೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು.

ಈ ವೇಳೆ ಮಾತನಾಡಿದ ಅವರು ನಮ್ಮ ರಾಜೀನಾಮೆಯಿಂದ ಅಧಿಕಾರ ಇಲ್ಲದೆ ಕೂತಿದ್ದ ಸಿದ್ದರಾಮಯ್ಯಗೆ ಅಧಿಕಾರ ಸಿಕ್ಕಿದೆ. ಸರಕಾರಿ ಕಾರು, ಬಂಗಲೆ ಸಿಕ್ಕಿದೆ. ಹದಿನಾಲ್ಕು ತಿಂಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಧಿಕಾರ ಇರ್ಲಿಲ್ಲ ಎಂದು ಗುಡುಗಿದ್ದಾರೆ.

ನಮ್ಮ ರಾಜೀನಾಮೆಯಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕನ ಸ್ಥಾನದ ಅಧಿಕಾರ ಸಿಕ್ಕಿದೆ. ಇದರಿಂದ ನಮ್ಮ ತಾಲೂಕಿಗೆ ಸಿಎಂ ಮಾಡೋ ಶಕ್ತಿ ಇದೆ. ಸಿಎಂ ಸ್ಥಾನದಿಂದ ಕೆಳಗಿಳಿಸೋ ಶಕ್ತಿಯೂ ಇದೆ ಎಂದು ಎದೆಯುಬ್ಬಿಸಿದ ಅವರು ನಿಮ್ಮ ಮೂಲಕ ಬಿ.ಸಿ.ಪಾಟೀಲ ತಾಲೂಕಿನ ಶಕ್ತಿ ತೋರಿಸಿದ್ದಾರೆ ಎಂದು ಹೇಳಿದರು.

Related Tags:

Related Posts :

Category:

error: Content is protected !!