ಮಸೀದಿಯಲ್ಲಿ ಕ್ವಾರಂಟೈನ್​: ಇಂಡೋನೇಷ್ಯಾದ 10, ದಿಲ್ಲಿಯ ಇಬ್ಬರು ನೇರ ಪೊಲೀಸರ ವಶಕ್ಕೆ!

ಬೆಳಗಾವಿ: ವೀಸಾ ನಿಯಮ ಉಲ್ಲಂಘಿಸಿ ಧಾರ್ಮಿಕ ಪ್ರಚಾರ ನಡೆಸಿದ ಆರೋಪದ ಮೇರೆಗೆ ಇಂಡೋನೇಷ್ಯಾದ 10 ಮತ್ತು ದೆಹಲಿಯ ಇಬ್ಬರು ಸೇರಿ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 12 ಮಂದಿಯಲ್ಲಿ ಐವರು ಮಹಿಳೆಯರು ಇದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬೆಳಗಾವಿ ನಗರದ ಮಾಳಮಾರುತಿ ಠಾಣೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಮಾರ್ಚ್ 11 ರಂದು ದೆಹಲಿಯಿಂದ ಬೆಳಗಾವಿಗೆ 12 ಜನರು ಬಂದಿದ್ದರು. ಮಾರ್ಚ್ 11ರಿಂದ ಮಾರ್ಚ್ 16ರವರೆಗೆ ನಗರದ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ಪ್ರಚಾರ ಮಾಡಿದ್ರು. ವೀಸಾ ನಿಯಮ ಉಲ್ಲಂಘನೆ ಆರೋಪದಡಿ ಏಪ್ರಿಲ್ 10ರಂದು ಮಾಳಮಾರುತಿ ಠಾಣೆಯಲ್ಲಿ 10 ಜನರ ವಿರುದ್ಧ FIR ದಾಖಲಾಗಿತ್ತು.

ಮಾರ್ಚ್ 16ರಿಂದ ಜೂನ್ 1ರವರೆಗೆ ಮಸೀದಿಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಕೊವಿಡ್ ವರದಿ ನೆಗೆಟಿವ್ ಹಾಗೂ ಕ್ವಾರಂಟೈನ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಐವರು ಮಹಿಳೆಯರು ಸೇರಿ 12 ಜನರನ್ನು ವಶಕ್ಕೆ ಪಡೆದಿದ್ದಾರೆ.


Related Posts :

Category:

error: Content is protected !!

This website uses cookies to ensure you get the best experience on our website. Learn more