ಕೊರೊನಾ ಭೀತಿ: ಏಕಾಂಗಿ ದಂಪತಿಯ ನೆರವಿಗೆ ಯಾರೂ ಮುಂದೆ ಬರುತ್ತಿಲ್ಲ!

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಭೀತಿ ಮಧ್ಯೆ ವರುಣಾಘಾತವೂ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಇತ್ತ ನಗರದ ಟೀಳಕವಾಡಿಯಲ್ಲಿರುವ ವೃದ್ಧ ದಂಪತಿ ಮಳೆ ಮತ್ತು ಎಲ್ಲೆಲ್ಲೂ ಕೊರೊನಾ ಮಹಾಮಾರಿ ಇರುವುದರಿಂದ ನರಕಯಾತನೆ ಅನುಭವಿಸುವ ಸ್ಥಿತಿ ಎದುರಾಗಿದೆ. ಹೌದು, ಭಾರಿ ಮಳೆ ಹಿನ್ನೆಲೆಯಲ್ಲಿ ವೃದ್ಧ ದಂಪತಿಯ ಮನೆಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರುಪಾಲಾಗಿವೆ.

ಕೊರೊನಾ ಇಲ್ಲದಿದ್ದರೂ, ಆರೋಗ್ಯವಂತ ದಂಪತಿಯ ನೆರವಿಗೆ ಯಾರೂ ಬರುತ್ತಿಲ್ಲ!
ನೋವಿನ ಸಂಗತಿಯೆಂದರೆ ತಮಗೆ ಕೊರೊನಾ ಇಲ್ಲದಿದ್ದರೂ, ಆರೋಗ್ಯವಂತ ದಂಪತಿಯ ನೆರವಿಗೆ ಯಾವ ಸಂಬಂಧಿಕರೂ ಬಂದಿಲ್ಲವಂತೆ. ಎಲ್ಲೆಡೆ, ಸೋಂಕಿನ ಭೀತಿ ಇರುವುದರಿಂದ ಯಾರೂ ಇವರಿಗೆ ಸಹಾಯ ಮಾಡುತ್ತಿಲ್ಲವಂತೆ. ಹೀಗಾಗಿ, ಮಳೆ ನೀರಿನಲ್ಲಿ ಅಡುಗೆ ಮಾಡಿಕೊಳ್ಳುತ್ತಾ ವೃದ್ಧ ದಂಪತಿ ಬದುಕು ಸಾಗಿಸುತ್ತಿದ್ದಾರೆ.

ವೃದ್ಧ ದಂಪತಿ ಏಕೈಕ ಮಗ ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ ಆತನೂ ಬಂದಿಲ್ಲ. ಹೀಗಾಗಿ, ದಿಕ್ಕು ತೋಚದೆ ವೃದ್ಧ ದಂಪತಿ ಅಸಹಾಯಕರಾಗಿ ಮರುಗುತ್ತಿದ್ದಾರೆ.

Related Tags:

Related Posts :

Category: