ಪ್ರಧಾನಿ ಮೋದಿಗೆ ನೀಡಿದ ರಾಮನ ಮೂರ್ತಿಯನ್ನು ಕೆತ್ತಿದ್ದು ಕನ್ನಡಿಗ ರಾಮ ಮೂರ್ತಿ!

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದ ಶಿಲಾನ್ಯಾಸದ ಬಳಿಕ ಪ್ರಧಾನಿ ಮೋದಿಗೆ ಮರದಲ್ಲಿ ಕೆತ್ತಲಾದ ಒಂದು ಸುಂದರ ಶ್ರೀರಾಮನ ಮೂರ್ತಿಯನ್ನ ಸಿಎಂ ಯೋಗಿ ಆದಿತ್ಯನಾಥ್​ ಉಡುಗೊರೆಯಾಗಿ ನೀಡಿದರು.

ಕುತೂಹಲದ ಸಂಗಿತಯೆಂದರೆ ಆ ಮೂರ್ತಿಯ ರೂವಾರಿ ಒಬ್ಬ ಕನ್ನಡಿಗ. ಹೌದು, ಬೆಂಗಳೂರಿನ ಶಿಲ್ಪಿ ಪಿ.‌ರಾಮಮೂರ್ತಿ ಕೆತ್ತಿದ ಕೋದಂಡ ರಾಮ ಮೂರ್ತಿಯನ್ನ ಮೋದಿಗೆ ಉಡುಗೊರೆಯಾಗಿ ನೀಡಲಾಯಿತು. ನಗರದ ಕೆಂಗೇರಿ‌ ನಿವಾಸಿ ರಾಮಮೂರ್ತಿ ಈ ಹಿಂದೆ 7.5 ಅಡಿ ಎತ್ತರದ ಕೋದಂಡರಾಮನ ಮೂರ್ತಿಯನ್ನ ಕೆತ್ತನೆ ಮಾಡಿದ್ರು. ಇದಕ್ಕಾಗಿ, 2016ರಲ್ಲಿ ರಾಮಮೂರ್ತಿ ರಾಷ್ಟ್ರ ಪ್ರಶಸ್ತಿ ಸಹ ಪಡೆದಿದ್ದರು

ಆಗ, ಈ ಮೂರ್ತಿಯನ್ನು ಉತ್ತರಪ್ರದೇಶ ಸಿಎಂ‌ ಯೋಗಿ ಆದಿತ್ಯನಾಥ್ ಬಹಳ ಇಷ್ಟಪಟ್ಟಿದ್ರು. ಹೀಗಾಗಿ ಆದಿತ್ಯನಾಥ್‌ ಮೋದಿಗೆ ಉಡುಗೊರೆ ನೀಡಲು ಅಂಥದ್ದೇ ಮೂರ್ತಿಯನ್ನು ಮಾಡಿಕೊಡುವಂತೆ ಕೇಳಿಕೊಂಡಿದ್ದರು.

Related Tags:

Related Posts :

Category: